‘ನಮೋ’ ಎಂದರೆ ‘ನಮಗೆ ಮೋಸ’ ಎಂಬುದು ಜನರಿಗೆ ಅರ್ಥವಾಗುತ್ತಿದೆ – ಪ್ರಮೋದ್ ಮಧ್ವರಾಜ್.

230
firstsuddi

ಉಡುಪಿ : ‘ನಮೋ’ ಎಂದರೆ ನರೇಂದ್ರ ಮೋದಿ ಅಲ್ಲ ಬದಲಾಗಿ ‘ನಮಗೆ ಮೋಸ’ ಎಂಬುದು ದೇಶದ ಜನತೆಗೆ ಈಗ ಅರ್ಥವಾಗುತ್ತಿದೆ. ದೇಶದಲ್ಲಿ ನರೇಂದ್ರ ಮೋದಿ ಒಬ್ಬರನ್ನು ಬಿಟ್ಟು ಬೇರೆ ಎಲ್ಲರೂ ದುಃಖದಲ್ಲಿಯೇ ದಿನದೂಡುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು. ಅವರು ಇಂದು ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ಜನವಿರೋಧಿ ಆರ್ಥಿಕ ನೀತಿಯ ವಿರುದ್ದ ಆಯೋಜಿಸಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಮಾಜಿ ಶಾಸಕ ಯು ಆರ್ ಸಭಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ನಾಯಕರಾದ ಪಿ ವಿ ಮೋಹನ್, ಹರೀಶ್ ಕಿಣಿ ಹಾಗೂ ಇತರ ನಾಯಕರು ಉಪಸ್ಥಿತರಿದ್ದರು.