ನಮ್ಮ ಪಕ್ಷಕ್ಕೆ ಒಂದು ಕೋಟಿ ಮತ ನೀಡಿದ್ರೆ, 70 ರೂ.ಗೆ ಮದ್ಯ : ಆಂಧ್ರ ಬಿಜೆಪಿ ಅಧ್ಯಕ್ಷ.

70
firstsuddi

ಅಮರಾವತಿ : ಆಂಧ್ರಪ್ರದೇಶದಲ್ಲಿ 2024ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಬಿಜೆಪಿ ಈಗಿನಿಂದಲೇ ತಯಾರಿ ನಡೆಸುತ್ತಿದೆ. ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಒಂದು ಕೋಟಿ ಮತಗಳನ್ನು ನೀಡಿದರೆ ಮದ್ಯವನ್ನು ಕೇವಲ 70 ರೂಪಾಯಿಗೆ ನೀಡಲಾಗುವುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸೋಮು ವೀರರಾಜು ಹೇಳಿದ್ದಾರೆ.

ನಿನ್ನೆ ವಿಜಯವಾಡದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗ ನೀಡುತ್ತಿರುವ ಮದ್ಯ ಬಹಳ ಕಳಪೆ ಮಟ್ಟದ್ದಾಗಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನಾವು ಉತ್ತಮ ಗುಣಮಟ್ಟದ ಮದ್ಯವನ್ನು ಬಹಳ ಕಡಿಮೆ ಬೆಲೆಗೆ ಕೊಡುತ್ತೇವೆ. ಈಗ ಪ್ರತಿಯೊಬ್ಬ ವ್ಯಕ್ತಿಯೂ ತಿಂಗಳಿಗೆ 12 ಸಾವಿರ ರೂಪಾಯಿಗಳನ್ನು ಮದ್ಯಕ್ಕಾಗಿಯೇ ಖರ್ಚು ಮಾಡುತ್ತಾರೆ. ಇದು ಕೂಡಾ ಸರ್ಕಾರವೇ ನಾನಾ ಯೋಜನೆಗಳ ಹೆಸರಿನಲ್ಲಿ ನೀಡುತ್ತಿದೆ ಎಂದರು.

ಆಂಧ್ರ ಪ್ರದೇಶದಲ್ಲಿ ಒಂದು ಕೋಟಿ ಜನ ಮದ್ಯಪಾನ ಮಾಡುತ್ತಾರೆ ಎನ್ನುವ ಅಂಕಿ ಅಂಶಗಳಿದ್ದು, ಈ ಒಂದು ಕೋಟಿ ಜನರೂ ಬಿಜೆಪಿಗೆ ವೋಟು ಹಾಕಿದರೆ ಉತ್ತಮ ಗುಣಮಟ್ಟದ ಮದ್ಯವನ್ನು ಕೇವಲ 70 ರೂಪಾಯಿ ಬೆಲೆಗೆ ನೀಡುತ್ತೇವೆ. ಮುಂದಿನ ದಿನಗಳಲ್ಲಿ ಇದರಿಂದ ಆದಾಯ ಹೆಚ್ಚಾದರೆ ಒಂದು ಕ್ವಾಟರ್ ಗೆ 50 ರೂಪಾಯಿಗೆ ಎಂದು ಅವರು ಭರವಸೆ ನೀಡಿದ್ದಾರೆ.