ನಾಡಿನೆಲ್ಲೆಡೆ ಆಯುಧಪೂಜೆ, ವಿಜಯದಶಮಿ ಸಂಭ್ರಮ : ಜನತೆಗೆ ಶುಭಾಶಯ ಕೋರಿದ ಗಣ್ಯರು…

73
firstsuddi

ಬೆಂಗಳೂರು : ನಾಡಿನ ಸಮಸ್ತ ಜನತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ  ಸಿಎಂ ಬೊಮ್ಮಾಯಿ, ನಾಡಿನ ಸಮಸ್ತ ಜನತೆಗೆ ಆಯುಧಪೂಜೆ ಹಾಗೂ ಮಹಾನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ಸರ್ವರಿಗೂ ಸುಖ- ಶಾಂತಿ, ಸಮೃದ್ಧಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಮಾಜಿ ಸಿಎಂ ಯಡಿಯೂರಪ್ಪ, ನಾಡಿನ ಸಮಸ್ತ ಜನತೆಗೆ ಮಹಾನವಮಿಯ ಭಕ್ತಿಪೂರ್ವಕ ಶುಭಾಶಯಗಳು. ನವರಾತ್ರಿಯ ಪರ್ವಕಾಲದ ಈ ಸಂದರ್ಭದಲ್ಲಿ, ಜಗನ್ಮಾತೆಯ ಆರಾಧನೆಯ ಜೊತೆಗೆ, ನಮ್ಮನ್ನು ಸಲಹುವ, ನೆರವು ನೀಡುವ, ರಕ್ಷಿಸುವ ವಸ್ತುವಿಶೇಷಗಳಲ್ಲಿ ದೇವರನ್ನು ಪೂಜಿಸುವ ‘ಆಯುಧಪೂಜೆ’ಯ ಈ ದಿನವು ಎಲ್ಲರ ಬಾಳಿನಲ್ಲಿ ಮಂಗಳವನ್ನು ತರಲಿ ಎಂದು ಟ್ವೀಟ್ ಮಾಡಿದ್ದಾರೆ.

ಕುಮಾರಸ್ವಾಮಿ ಟ್ವೀಟ್ ಮಾಡಿದ್ದು,ನಾಡಿನ ಸಮಸ್ತ ಜನತೆಗೆ ಮಹಾನವಮಿ ಹಾಗೂ ಆಯುಧ ಪೂಜೆಯ ಶುಭಾಶಯಗಳು. ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಆ ತಾಯಿ ಚಾಮುಂಡೇಶ್ವರಿಯನ್ನು ಭಕ್ತಿಪೂರ್ವಕವಾಗಿ ಪ್ರಾರ್ಥನೆ ಮಾಡುತ್ತೇನೆ.

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ದುಷ್ಟರ ನಾಶ, ಸಜ್ಜನರ ರಕ್ಷಣೆಯ ಸಂದೇಶ ಸಾರುವ ಮಹಾನವಮಿ ಮತ್ತು ವೃತ್ತಿಗೌರವದ ಪ್ರತೀಕವಾಗಿರುವ ಆಯುಧಪೂಜೆಯನ್ನು ಅರ್ಥಪೂರ್ಣವಾಗಿ ನಮ್ಮ ಬದುಕಿನಲ್ಲಿ ಆಚರಿಸೋಣ. ನಾಡ ಬಾಂಧವರೆಲ್ಲರಿಗೆ ದಸರಾ ಹಬ್ಬದ ಶುಭ ಹಾರೈಕೆಗಳು ಎಂದು ಟ್ವೀಟ್ ಮಾಡಿದ್ದಾರೆ.