ಬೆಂಗಳೂರು : ಸಿಡಿ ಯುವತಿಯ ಮೂರನೇ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿರುವ ರಮೇಶ್ ಜಾರಕಿಹೊಳಿ ಅವರು ಇನ್ನೂ ಹತ್ತು ವಿಡಿಯೋ ಬರಲಿ ನಾನು ಎದುರಿಸುದೋದಕ್ಕೆ ರೆಡಿ, ನನ್ನ ಬಳಿಯೂ ವಕೀಲರಿದ್ದಾರೆ ಎಂದು ಹೇಳಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವಳು ವಕೀಲರ ಮೂಲಕ ದೂರು ನೀಡಲಿ. ನಮಗೂ ವಕೀಲರಿದ್ದಾರೆ. ನನ್ನ ಮೇಲೆ ರೇಪ್ ಕೇಸ್ ಹಾಕುವುದಾದರೆ ಹಾಕಲಿ ನಾನು ಅದನ್ನು ಎದುರಿಸಲು ರೆಡಿಯಾಗಿದ್ದೇನೆ. ದೂರು ನೀಡುವುದಿದ್ದರೆ ಯುವತಿ ಇಷ್ಟು ದಿನ ಏನು ಮಾಡುತ್ತಿದ್ದಳು? ಇದು ನನ್ನ ವಿರುದ್ಧ ಮಹಾಷಡ್ಯಂತ್ರ ಎಂದು ಹೇಳಿದ್ದೆ. ನಾನೇಕೆ ಜಾಮೀನು ತೆಗೆದುಕೊಳ್ಳಲಿ, ನಾನು ಕಾನೂನು ಹೋರಾಟಕ್ಕೆ ಸಿದ್ಧನಾಗಿದ್ದೇನೆ. ಇದೊಂದು ನನಗೆ ದೊಡ್ಡ ಸಮಸ್ಯೆಯೇ ಅಲ್ಲ ಎಂದು ತಿಳಿಸಿದ್ದಾರೆ.










