ಬೆಂಗಳೂರು : ನಗರದಲ್ಲಿ ಸುದ್ದಿಗಾರರೊಂದಿಗೆ ಸಿಡಿ ಯುವತಿಯ ಮೂರನೇ ವೀಡಿಯೋ ಹೇಳಿಕೆ ಬಿಡುಗಡೆಗೆ ಪ್ರತಿಕ್ರಿಯಿಸಿ ಮಾತನಾಡಿದ ಆರೋಗ್ಯ ಸಚಿವ ಕೆ. ಸುಧಾಕರ್ ಅವರು, ಪ್ರಕರಣ ಬೆಳಕಿಗೆ ಬಂದು ಎಷ್ಟು ದಿನ ಆಗಿದೆ. ಇನ್ನೊಂದು ತಿಂಗಳಾದ ಬಳಿಕ ಆ ತಾಯಿ ಇನ್ನೇನು ಬಿಡುಗಡೆ ಮಾಡುತ್ತಾಳೋ ನೋಡೋಣ ಎಂದು ಹೇಳಿದ್ದಾರೆ.
ಎಸ್ಐಟಿ ತನಿಖೆಯಾಗ್ತಿದೆ. ಈ ಹಂತದಲ್ಲಿ ನಾನು ಏನೂ ಮಾತನಾಡೋದು ಸರಿಯಲ್ಲ. ಈಗ ನಾನು ಈ ಬಗ್ಗೆ ಏನೂ ಹೇಳದಿರುವುದೇ ಉತ್ತಮ ಎಂದರು.










