ನಾನು ಹುಟ್ಟಿ ಬೆಳೆದ ಊರಿನ ಅಭಿವೃದ್ಧಿ ಬಗ್ಗೆ ಯೋಚಿಸುವುದು ನನ್ನ ಆದ್ಯ ಕರ್ತವ್ಯ : ಬಿ.ಎಸ್. ಯಡಿಯೂರಪ್ಪ…

232
firstsuddi

ಮಂಡ್ಯ : ಸಿಎಂ ಬಿ.ಎಸ್. ಯಡಿಯೂರಪ್ಪ ಅವರು 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಇಂದು ತಮ್ಮ ಹುಟ್ಟೂರಾದ ಬೂಕನಕೆರೆಗೆ ಆಗಮಿಸಿದ್ದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ನಾನು ನಿನ್ನೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೇನೆ. ನಾನು ಹುಟ್ಟಿ ಬೆಳೆದ ಊರಿಗೆ ಬಂದು ಇಲ್ಲಿನ ಅಭಿವೃದ್ಧಿಗಾಗಿ ಯೋಚಿಸುವುದು ನನ್ನ ಕರ್ತವ್ಯವಾಗಿದೆ. ಇಂದು ಬೂಕನಕೆರೆಗೆ ನಾನು ನಮ್ಮ ಮನೆ ದೇವರಿಗೆ ಪೂಜೆ ಸಲ್ಲಿಸಲು ಬಂದಿದ್ದೇನೆ. ಬಳಿಕ ಮೇಲುಕೋಟೆಯ ಚೆಲುವನಾರಾಯಣಸ್ವಾಮಿಗೆ ಪೂಜೆ ಸಲ್ಲಿಸಲಿದ್ದೇನೆ. ಪೂಜೆ ಮುಗಿದ ಬಳಿಕ ಬೆಂಗಳೂರಿಗೆ ತೆರಳುತ್ತೇನೆ ಎಂದರು.