ನಾಲ್ಕು ಅಡಿ ಉದ್ದದ ಹಾವನ್ನ ನುಂಗಲು ಯತ್ನಿಸಿದ ನಾಗರಹಾವು!

121
firstsuddi

ತುಮಕೂರು : ಹಾವನ್ನೇ ಇನ್ನೊಂದು ಹಾವು ನುಂಗಲು ಯತ್ನಿಸಿರುವ ಘಟನೆ ನಗರದ ಶಿರಾ ರಸ್ತೆಯ ಲಿಂಗಾಪುರ ಸರ್ವೀಸ್ ರಸ್ತೆಯಲ್ಲಿ ನಡೆದಿದೆ. ಈ ಅಪರೂಪದ ದೃಶ್ಯ ನೋಡಿದ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.

ಸುಮಾರು ಮೂರು ಅಡಿ ಉದ್ದದ ನಾಗರಹಾವು ನಾಲ್ಕು ಅಡಿ ಉದ್ದದ ಜೋರು ಪೋತ ಎನ್ನುವ ಹಾವನ್ನು ನುಂಗಲು ಯತ್ನಿಸಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ವಾರಂಗಲ್ ಸಂಸ್ಥೆಯ ದಿಲೀಪ್ ಎರಡು ಹಾವುಗಳನ್ನು ರಕ್ಷಿಸಿದ್ದು, ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.