ನಾಲ್ಕು ಕಾಡಾನೆಗಳು ಆಯತಪ್ಪಿ ಕೆರೆಗೆ ಬಿದ್ದು ಪರದಾಟ…

55
firstsuddi

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರದ ಗ್ರಾಮದಲ್ಲಿ ನಿನ್ನೆ ರಾತ್ರಿ ನಾಲ್ಕು ಕಾಡಾನೆಗಳು ಆಯತಪ್ಪಿ ತೋಟದಲ್ಲಿದ್ದ ಕೆರೆಗೆ ಬಿದ್ದು ಹೊರಬರಲಾಗದೇ ಪರದಾಡಿದ ಘಟನೆ ನಡೆದಿದೆ.

ಆಹಾರ ಹುಡುಕುತ್ತಾ ಬಂದಿರುವ ಎರಡು ಮರಿ ಆನೆ ಮತ್ತು ಎರಡು ದೊಡ್ಡ ಆನೆಗಳು ಅಜ್ಜಾವರದ ಸನತ್ ರೈ ಎಂಬವರ ತೋಟದಲ್ಲಿರುವ ಸಣ್ಣ ಕೆರೆಗೆ ಬಿದ್ದಿವೆ. ಇಂದು ಬೆಳಗ್ಗೆ ತೋಟಕ್ಕೆ ತೆರಳಿದ್ದಾಗ ವಿಚಾರ ತಿಳಿದ ಸನತ್ ರೈ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಜೆಸಿಬಿ ಬಳಸಿ ಆನೆಗಳ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಇನ್ನೂ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.