ನಾಲ್ವರು ಉದ್ಯಮಿಗಳ ಮನೆ ಮತ್ತು ಕಛೇರಿಗಳ ಮೇಲೆ ಐಟಿ ದಾಳಿ.

31

ಬೆಳಗಾವಿ: ಇಲ್ಲಿನ ಉದ್ಯಮಿಗಳಾದ ವಿನೋದ್ ದೊಡ್ಡಣ್ಣವರ, ಪುಷ್ಪದಂತ ದೊಡ್ಡಣ್ಣವರ, ಅಜಿತ್ ಪಟೇಲ್ ಮತ್ತು ಅಶೋಕ ಹುಂಬರವಾಡಿ ಎಂಬವರ ಮನೆಗಳು ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದೊಡ್ಡಣ್ಣವರ ಕುಟುಂಬದ ವಿನೋದ್ ದೊಡ್ಡಣ್ಣವರ, ಸಕ್ಕರೆ ಕಾರ್ಖಾನೆ ಮಾಲೀಕರಾಗಿದ್ದಾರೆ. ಪುಷ್ಪದಂತ ದೊಡ್ಡಣ್ಣವರ ಅವರು ದೇಶ-ವಿದೇಶಗಳಿಗೆ ಕಬ್ಬಿಣ ಹಾಗೂ ಗ್ರಾನೈಟ್ ರಫ್ತು ಮಾಡುತ್ತಾರೆ. ಕಾಗವಾಡ ತಾಲೂಕಿನಲ್ಲಿ 2 ಸಕ್ಕರೆ ಕಾರ್ಖಾನೆಗಳನ್ನು ಇವರ ಕುಟುಂಬ ಹೊಂದಿದೆ. ಗೋವಾದಿಂದ ಆಗಮಿಸಿರುವ ಐಟಿ ಅಧಿಕಾರಿಗಳು ಒಟ್ಟು ಐದು ತಂಡಗಳಾಗಿ ಸೋಮವಾರ ಮಧ್ಯರಾತ್ರಿ ಮೂರು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿರುವ ಉದ್ಯಮಿ ಅಜಿತ್ ಪಟೇಲ್, ಗಣೇಶಪುರದಲ್ಲಿರುವ ಅಶೋಕ ಐರನ್ ಮಾಲೀಕ ಅಶೋಕ ಹುಂಬರವಾಡಿ ಮನೆಯಲ್ಲೂ ಐಟಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ.