ಬೆಂಗಳೂರು: ಏರೋ ಇಂಡಿಯಾ 2025 ಏರ್ ಶೋಗೆ ದಿನಗಣನೆ ಶುರುವಾಗಿದೆ. ಫೆಬ್ರವರಿ 10 ರಿಂದ 14 ರವರಗೆ ಯಲಹಂಕದಲ್ಲಿ ಏರ್ ಶೋ ನಡೆಯಲಿರುವ ಕಾರಣ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ವಿಮಾನಗಳ ಕಾರ್ಯಾಚರಣೆ ಮೇಲೆಯೂ ಪರಿಣಾಮವಾಗಲಿದೆ. ಏರ್ ಶೋ ವೇಳೆ ನಿಗದಿತ ಸಮಯದಲ್ಲಿ ವಿಮಾನಗಳ ಹಾರಾಟ ಬಂದ್ ಆಗಲಿದೆ. ಲ್ಯಾಂಡಿಂಗ್ ಹಾಗೂ ಟೇಕಾಫ್‍ಗಳು ಇರುವುದಿಲ್ಲ. ಹೀಗಾಗಿ ಏರ್‌ಲೈನ್ಸ್ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡು ಬರುವಂತೆ ಪ್ರಯಾಣಿಕರಿಗೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ ನಡೆಯುವ ಏರ್ ಶೋನಿಂದಾಗಿ ಬೆಂಗಳೂರು ಹಾಗೂ ವಾಯುಸೇನೆಗೆ ಕೋಟ್ಯಾಂತರ ರೂಪಾಯಿ ಆದಾಯ ಬುರುತ್ತದೆ. ಯಲಹಂಕದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸಾವಿರಾರು ಜನ ದೇಶ ವಿದೇಶಗಳಿಂದ ಆಗಮಿಸುತ್ತಾರೆ. ಏರ್ ಶೋ ವೇಳೆ ವಾಯುಪಡೆ ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಕೆಂಪೇಗೌಡ ಏರ್‌ಪೋರ್ಟ್ ನಿಂದ ಟೇಕಾಫ್ ಮತ್ತು ಲ್ಯಾಂಡಿಂಗ್ ಸ್ಥಗಿತಗೊಳಿಸಲಾಗುತ್ತದೆ. ಪೆಬ್ರವರಿ 5 ರಿಂದ 8 ರವರೆಗೆ ಬೆಳಗ್ಗೆ 9 ಗಂಟೆಯಿಂದ 12 ಮತ್ತು ಮಧ್ಯಾಹ್ನ 2 ರಿಂದ ಸಂಜೆ 5 ಗಂಟೆವರೆಗೂ ವಿಮಾನಗಳ ಹಾರಾಟಕ್ಕೆ ನಿಬರ್ಂಧವಿದೆ. ಪೆಬ್ರವರಿ 09 ರಂದು ಬೆಳಗ್ಗೆ 9 ರಿಂದ 12 ಗಂಟೆವರೆಗೂ ವಿಮಾನಗಳ ಹಾರಾಟ ಸ್ಥಬ್ದವಾಗಲಿದೆ. ಪೆಬ್ರವರಿ 10 ರಂದು ಬೆಳಗ್ಗೆ 9 ಗಂಟೆಯಿಂದ 12 ಮತ್ತು ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆ ವರೆಗೂ ವಿಮಾನ ಕಾರ್ಯಾಚರಣೆ ಇರುವುದಿಲ್ಲ. ಫೆಬ್ರವರಿ 11 ಮತ್ತು 12 ರಂದು 12 ಗಂಟೆಯಿಂದ 3 ಗಂಟೆವರೆಗೂ ವಿಮಾನಗಳ ಹಾರಾಟಕ್ಕೆ ನಿಬರ್ಂಧ ಹೇರಲಾಗಿದೆ. ಪೆಬ್ರವರಿ 13 ಮತ್ತು 14 ರಂದು ಬೆಳಗ್ಗೆ 9 ರಿಂದ 12 ಗಂಟೆ ಮತ್ತು ಮದ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆವರೆಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆ ಇರುವುದಿಲ್ಲ.










