ನಾಳೆ ಬೆಂಗಳೂರಿಗೆ ಮೋದಿ – ನಗರದ ಈ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧ…

86
firstsuddi

ಬೆಂಗಳೂರು : ನಾಳೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿರುವ ಹಿನ್ನೆಲೆ ಸುಗಮ ಸಂಚಾರ ವ್ಯವಸ್ಥೆಗೆ ಅಡಚಣೆಯಾಗದಂತೆ ಹಾಗೂ ಭದ್ರತಾ ದೃಷ್ಠಿಯಿಂದ ಹಲವು ರಸ್ತೆಗಳಲ್ಲಿ ಸಂಚಾರವನ್ನು ನಿಷೇಧಿಸಲಾಗಿದೆ.

ಮೋದಿ ಅವರು ಮೊದಲು ಶಾಸಕರ ಭವನದಲ್ಲಿ ಕನಕದಾಸ ಮತ್ತು ವಾಲ್ಮೀಕಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ಆನಂತರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್-2 ಉದ್ಘಾಟನೆ ಮತ್ತು ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಲಿದ್ದಾರೆ.

ಸಿಟಿಓ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ಸರ್ಕಲ್ ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ ಮತ್ತು ಏರ್ ಪೋರ್ಟ್ ಎಲಿವೇಟೆಡ್ ಕಾರಿಡಾರ್ ರಸ್ತೆ, ಮಹಾರಾಣಿ ಬ್ರಿಡ್ಜ್ ನಿಂದ – ರೈಲ್ವೆ ಸ್ಟೇಷನ್ ಪ್ರವೇಶ ದ್ವಾರದವರೆಗೆ, ಶಾಂತಲಾ ಜಂಕ್ಷನ್ ನಿಂದ ಮೈಸೂರು ಬ್ಯಾಂಕ್ ಸರ್ಕಲ್ ವರೆಗೆ, ಕೋಡೆ ಅಂಡರ್ ಪಾಸ್ನಿಂದ ಪಿ.ಎಫ್ ವರೆಗೆ, ಇಂಟರ್ ನ್ಯಾಷನಲ್ ಏಪೋರ್ಟ್ ನ ಸುತ್ತ ಮತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧ ಇರಲಿದೆ.

ಪರ್ಯಾಯ ಮಾರ್ಗಗಳು :
ಮೈಸೂರು ಬ್ಯಾಂಕ್ ವೃತ್ತ, ಎಲ್.ಆರ್.ಡಿ.ಇ ವೃತ್ತ, ಟ್ರಿಲೈಟ್ ಜಂಕ್ಷನ್, ರೇಸ್ ವ್ಯೂವ್ ಸರ್ಕಲ್, ಬಿಹೆಚ್ ಇಎಲ್ ಸರ್ಕಲ್, ಮಾರಮ್ಮ ಸರ್ಕಲ್, ಭಾಷ್ಯ ಸರ್ಕಲ್, ಕ್ವೀನ್ ವೃತ್ತ, ಬಾಳೇಕುಂದ್ರಿ ಜಂಕ್ಷನ್, ಕೆಆರ್ ಪುರಂ-ಬಾಣಸವಾಡಿ, ಮಡಿವಾಳ-ವೈಟ್ ಫೀಲ್ಡ್, ಬನಶಂಕರಿ-ಕೆಂಗೇರಿ-ಮಾಗಡಿ ರಸ್ತೆ, ತುಮಕೂರು ರಸ್ತೆ-ಪೀಣ್ಯ-ಯಶವಂತಪುರ-ಹೊಸೂರು-ಆನೇಕಲ್, ಜಯನಗರ-ಬಸವನಗುಡಿ, ಹಲಸೂರು, ಶಿವಾಜಿನಗರ ರಸ್ತೆ ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ.