ಗಾಂಧಿನಗರ : ನಿಂತಿದ್ದ ಟ್ರಕ್‌ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಏಳು ಜನರು ಸಾವನ್ನಪ್ಪಿರುವ ಘಟನೆ ಗುಜರಾತ್ ನ ಪಟಾನ್ ಜಿಲ್ಲೆಯ ರಾಧನ್ ಪುರದ ವಾರಾಹಿ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಪಿನಾಲ್ ಮಿಥುನ್ ಭಾಯ್ ವಂಜಾರಾ (7), ಕಾಜಲ್ ಮೋಹನ್ ಭಾಯ್ ಪರ್ಮಾರ್ (9), ಅಮಿತಾ ಖೇಮರಾಜಭಾಯ್ ವಂಜಾರಾ (15), ಸೀಮಾಬೆನ್ ಮಿಥುನ್ ಭಾಯ್ ವಂಜಾರಾ (24), ರಾಘಬೆನ್ ಮೋಹನ್ ಭಾಯ್ ಪರ್ಮಾರ್ (35), ಸಂಜುಭಾಯ್ ಬಾಬುಭಾಯ್ ಹೂಗಾರ (50), ಮತ್ತು ದುಘಾಭಾಯಿ ಸೇಜಾಭಾಯಿ ರಾಥೋಡ್ (50) ಎಂದು ಗುರುತಿಸಲಾಗಿದೆ.
ಟೈರ್ ಸ್ಫೋಟಗೊಂಡ ಪರಿಣಾಮ ಜೀಪ್ ರಸ್ತೆಯಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಜೀಪ್ ನಲ್ಲಿ ಕನಿಷ್ಠ 15 ಜನರು ಪ್ರಯಾಣಿಸುತ್ತಿದ್ದರು. ಘಟನೆಯಲ್ಲಿ 8 ಜನರು ಗಾಯಗೊಂಡಿದ್ದಾರೆ.
ಭಾರತೀಯ ದಂಡ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.










