ನಿಯಂತ್ರಣ ತಪ್ಪಿ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಬಿಎಂಡಬ್ಲೂ ಬೈಕ್- ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು…

59
firstsuddi

ಬೆಂಗಳೂರು: ಲೈಟ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ 3.30ರ ಸಮಯದಲ್ಲಿ ನಗರದ ಯಶವಂತಪುರದ ಆರ್​ಎಮ್​​ಸಿ ಯಾರ್ಡ್ ಬಳಿ ನಡೆದಿದೆ.

ಬೈಕ್ ಸವಾರರಾದ ಮನಮೋಹನ್(31), ನಿಖಿಲ್(25) ಮೃತ ದುರ್ದೈವಿಗಳು. ಬಿಎಂಡಬ್ಲೂ ಬೈಕ್​ನಲ್ಲಿ ಡ್ರಂಕ್ ಅಂಡ್ ಡ್ರೈವ್ ಮಾಡಿ ಹೆಲ್ಮೆಟ್ ಧರಿಸದೆ, ಅತಿವೇಗದಿಂದ ಯಶವಂತಪುರದಿಂದ ಆರ್​ಎಮ್​​ಸಿ ಯಾರ್ಡ್ ರೋಡ್ ಕಡೆಗೆ ಯುವಕರು ಬೈಕ್ ಚಲಾಯಿಸಿಕೊಂಡು ಬರುತ್ತಿದ್ದರು.

ಮದ್ಯದ ಅಮಲಿನಲ್ಲಿದ್ದ ಯುವಕರಿಗೆ ಬೈಕ್ ನಿಯಂತ್ರಣ ಸಿಗದೆ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಬೈಕ್​ನಿಂದ ಹಾರಿಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ.

ಇಬ್ಬರ ಮೃತದೇಹವನ್ನು ಎಮ್ಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.