ನಿರ್ಭಯಾ ಪ್ರಕರಣ-ಗಲ್ಲು ಶಿಕ್ಷೆ ಪ್ರಶ್ನಿಸಿ ಸುಪ್ರೀಂ ಕೋರ್ಟ್‍ಗೆ ಕ್ಯುರೇಟಿವ್ ಅರ್ಜಿ ಸಲ್ಲಿಸಿದ ಆರೋಪಿ…

584
firstsuddi

ನವದೆಹಲಿ : ನಿರ್ಭಯಾ ಅತ್ಯಚಾರದ ಪ್ರಕರಣದ ಆರೋಪಿಗಳಿಗೆ ದೆಹಲಿಯ ಪಟಿಯಾಲ ಕೋರ್ಟ್ ಹೊರಡಿಸಿರುವ ಡೆತ್ ವಾರೆಂಟ್ ಹಾಗೂ ಗಲ್ಲುಶಿಕ್ಷೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಅಂತಿಮ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಲಾಗಿದೆ. ಈ ಪ್ರಕರಣದ ಕುರಿತು ಜ.7ರಂದು ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ತೀರ್ಪು ನೀಡಿ ಎಲ್ಲಾ ಆರೋಪಿಗಳಿಗೆ ಜ.22 ರ ಬೆಳಿಗ್ಗೆ 7ಗಂಟೆಗೆ ಗಲ್ಲುಶಿಕ್ಷೆ ವಿಧಿಸುವಂತೆ ಆದೇಶ ಹೊರಡಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಆರೋಪಿ ವಿನಯ್ ಕುಮಾರ್ ಮರು ಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ಜ.22ರ ಒಳಗೆ ಈ ಅರ್ಜಿಯನ್ನು ಪರಿಶೀಲನೆ ನಡೆಸಿ ತೀರ್ಪನ್ನು ಪ್ರಕಟಿಸಿದರೆ ಹಾಗೂ ಈ ಅರ್ಜಿಯನ್ನು ವಜಾಗೊಳಿಸಿದರೆ ಮಾತ್ರ ಈಗಾ ನಿಗದಿಪಡಿಸಿರುವ ದಿನಾಂಕದಂದು ಆರೋಪಿಗಳನ್ನು ಗಲ್ಲಿಗೇರಿಸಬಹುದು. ಒಂದು ವೇಳೆ ಅರ್ಜಿ ವಿಚಾರಣೆ ತಡವಾದರೆ ಗಲ್ಲುಶಿಕ್ಷೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಗಳಿವೆ