ನಿರ್ಲಕ್ಷ್ಯ ಮಾಡಬೇಡಿ, ಕೋವಿಡ್ ಲಕ್ಷಣ ಕಂಡುಬಂದ ಕೂಡಲೇ ಟೆಸ್ಟ್ ಮಾಡಿಸಿಕೊಳ್ಳಿ – ಡಿಸಿ ಜಿ. ಜಗದೀಶ್ ಮನವಿ…

110
firstsuddi

ಉಡುಪಿ : ಜಿಲ್ಲಾಸ್ಪತ್ರೆಯಲ್ಲಿ ಐಸಿಯು ಭರ್ತಿಯಾದ ಹಿನ್ನೆಲೆ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಜಿಲ್ಲೆಯ ಜನರಿಗೆ ಮನವಿಯೊಂದನ್ನು ಮಾಡಿದ್ದು ,ಸೋಂಕಿನ ಲಕ್ಷಣ ಕಂಡು ಬಂದ ಕೂಡಲೇ ಟೆಸ್ಟ್ ಮಾಡಿಸುವಂತೆ ಸಾರ್ವಜನಿಕರಲ್ಲಿ ವಿನಂತಿ ಮಾಡಿದ್ದಾರೆ.

ಈಗಾಗಲೇ ಜಿಲ್ಲೆಯಲ್ಲಿ ಪರಿಸ್ಥಿತಿ ಕೈಮೀರುವ ಹಂತದಲ್ಲಿದೆ. ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಾ ಇದ್ದು, ಸಾವಿನ ಸಂಖ್ಯೆಯೂ ಕೂಡ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಸೋಂಕಿನ ಲಕ್ಷಣ ಇರುವವರು ನಿರ್ಲಕ್ಷ್ಯ ಮಾಡಬಾರದು. ಲಕ್ಷಣ ಇದ್ದರೂ ಹತ್ತು ಹದಿನೈದು ದಿನ ಮನೆಯಲ್ಲೇ ಇದ್ದು ಕೊರೊನಾ ಉಲ್ಬಣಿಸಿದ ಬಳಿಕ ನೇರ ಐಸಿಯೂಗೆ ಬರುವವರ ಸಂಖ್ಯೆ ಹೆಚ್ಚುತ್ತಲೆ ಇದೆ. ಹೀಗೆ ಮಾಡಬೇಡಿ. ತಕ್ಷಣ ಬಂದು ಟೆಸ್ಟ್ ಮಾಡಿಸಿ. ಸಂಬಂಧಿಕರು ಮತ್ತು ಬಂಧುಗಳೇ ಮನೆಗೆ ಬಂದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈ ಸಮಯದಲ್ಲಿ ಸಂಬಂಧಿಕರು ಮನೆಯಲ್ಲಿದ್ದರೂ ಐಸೊಲೇಷನ್ ನಲ್ಲಿರಲಿ. ಮನೆಯ ಒಬ್ಬರಿಗೆ ಬಂದರೆ ಎಲ್ಲರಿಗೂ ಸೋಂಕು ಹರಡುತ್ತದೆ.ಇದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸುತ್ತದೆ ಎಂದು ಹೇಳಿದ್ದಾರೆ.