ನೂತನ ಕೃಷಿ ಕಾನೂನು ವಿರೋಧಿಸಿ ಸಂಸತ್ ಭವನಕ್ಕೆ ಟ್ರ್ಯಾಕ್ಟರ್ ನಲ್ಲಿ ಬಂದ ರಾಹುಲ್ ಗಾಂಧಿ.

95
firstsuddi

ನವದೆಹಲಿ : ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾನೂನುಗಳನ್ನು ವಿರೋಧಿಸಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಟ್ರ್ಯಾಕ್ಟರ್ ನಲ್ಲಿ ಸಂಸತ್ ಭವನಕ್ಕೆ ಬರುವ ಮೂಲಕ ರೈತರ ಪ್ರತಿಭಟನೆಗೆ ಬೆಂಬಲ ನೀಡಿದರು. ಈ ವೇಳೆ ರಣ್ ದೀಪ್ ಸುರ್ಜೇವಾಲಾ, ದೀಪೇಂದ್ರ ಹುಡ್ಡಾ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರು ಜೊತೆ ಇದ್ದರು.

ಕೇಂದ್ರ ಸರ್ಕಾರ ರೈತರ ಸಮಸ್ಯೆಯನ್ನು ಆಲಿಸುತ್ತಿಲ್ಲ. ಈ ಕಾನೂನುಗಳು ರೈತರನ್ನು ಕತ್ತಲೆಗೆ ತಳ್ಳಲಿವೆ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನುಗಳು 2-3 ಉದ್ಯಮಿಗಳಿಗಾಗಿ ಎಂಬುದು ಇಡೀ ದೇಶಕ್ಕೇ ತಿಳಿದಿದೆ. ಸರ್ಕಾರ ಈ ಕೂಡಲೇ ನೂತನ ಕೃಷಿ ಕಾನೂನುಗಳನ್ನು ಹಿಂಪಡೆದುಕೊಳ್ಳಬೇಕು ಎಂದು ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದರು.

ಕಳೆದ ಒಂದು ವರ್ಷದಿಂದಲೂ ಕೃಷಿ ಕಾನೂನು ವಿರೋಧಿಸಿ ರಾಜಧಾನಿ ದೆಹಲಿಯ ಗಡಿ ಭಾಗಗಳಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.