ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಕೊರೊನಾ ಪೀಡಿತ ದಂಪತಿ!

93
firstsuddi

ಮಂಗಳೂರು : ಕೊರೊನಾ ಪೀಡಿತ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಸುರತ್ಕಲ್ ನ ಚಿತ್ರಾಪುರದ ರಹೆಜಾ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.

ಆರ್ಯ ಸುವರ್ಣ ಮತ್ತು ಗುಣ ಸುವರ್ಣ ಆತ್ಮಹತ್ಯೆ ಮಾಡಿಕೊಂಡ ದಂಪತಿ ಎಂದು ತಿಳಿದುಬಂದಿದೆ. ಕಳೆದ ಒಂದು ವಾರದಿಂದ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರಮೇಶ್ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು, ಅಂತ್ಯಕ್ರಿಯೆ ಮಾಡುವಂತೆ ವಾಯ್ಸ್ ಮೆಸೇಜ್ ನಲ್ಲಿ ಮನವಿ ಮಾಡಿದ್ದಾರೆ. ಅಂತ್ಯಕ್ರಿಯೆಗಾಗಿ ಒಂದು ಲಕ್ಷ ರೂಪಾಯಿ ಇಟ್ಟಿರುವುದಾಗಿ ಹೇಳಿದ್ದು, ಅಲ್ಲದೆ ಮನೆಯ ಉಪಕರಣ ಮಾರಿ ಬಡವರಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ವಾಯ್ಸ್ ಮೆಸೇಜ್ ಬಂದ ತಕ್ಷಣ ಪೊಲೀಸ್ ಕಮೀಷನರ್ ಇಬ್ಬರ ಪತ್ತೆಗೆ ಮತ್ತು ರಕ್ಷಣೆ ಮಾಡುವಂತೆ ಮಾಧ್ಯಮ ಗ್ರೂಪ್ ಗಳಲ್ಲಿ ಅವರು ಮನವಿ ಮಾಡಿದ್ದರು. ಪೊಲೀಸ್ ಇಲಾಖೆಯ ಮೂಲಕವೂ ಅವರ ಪತ್ತೆಗೆ ಪ್ರಯತ್ನಿಸಿದ್ದಾರೆ. ಕೊನೆಗೆ ಅವರ ನಿವಾಸ ಪತ್ತೆಯಾದರೂ, ಅಷ್ಟರಲ್ಲಿ ಇಬ್ಬರು ನೇಣಿಗೆ ಶರಣಾಗಿದ್ದರು.

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.