ಪತಿ-ಪತ್ನಿಯ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯ!

81
firstsuddi

ಮೂಡಬಿದರೆ : ಪತ್ನಿಯನ್ನು ಪತಿ ಹತ್ಯೆಗೈದಿರುವ ಘಟನೆ ಮೂಡುಬಿದಿರೆ ತಾಲ್ಲೂಕಿನ ದರೆಗುಡ್ಡೆ ಗ್ರಾ.ಪಂ ವ್ಯಾಪ್ತಿಯ ಮಠ ಎಂಬಲ್ಲಿ ನಿನ್ನೆ ಸಂಜೆ ನಡೆದಿದೆ. ಮಠ ನಿವಾಸಿ ಸುನೀತಾ(30) ಕೊಲೆಯಾದವರು. ಇವರ ಪತಿ ದಿನ್ ರಾಜ್ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

ನಿನ್ನೆ ಸಂಜೆ ಪತಿ- ಪತ್ನಿ ಮಧ್ಯೆ ಜಗಳ ನಡೆದಿದ್ದು, ಈ ವೇಳೆ ದಿನ್ ರಾಜ್ ಯಾವುದೋ ಮೊಂಡಾದ ಆಯುಧದಿಂದ ಪತ್ನಿಯ ತಲೆಗೆ ಮಾರಣಾಂತಿಕವಾಗಿ ಹೊಡೆದಿದ್ದಾನೆ ಎನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸುನೀತಾ ಕುಸಿದು ಬಿದ್ದಿದ್ದು, ತಲೆಯಿಂದ ತೀವ್ರ ರಕ್ತಸ್ರಾವವಾಗಿದೆ. ವಿಷಯ ತಿಳಿದ ಬಳಿಕ ಮನೆಮಂದಿ ಹಾಗೂ ಸ್ಥಳೀಯರು ತಕ್ಷಣ ಸುನೀತಾರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆಗೆ ಫಲಿಸದೇ ಸುನೀತಾ ಮಧ್ಯರಾತ್ರಿ 12:20ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಮೂಡುಬಿದಿರೆ ಪೊಲೀಸರು ಆರೋಪಿ ದಿನ್ ರಾಜ್ ನನ್ನು ಇಂದು ಬೆಳಗ್ಗೆ ಬಂಧಿಸಿದ್ದಾರೆ.