ಪತಿಯ ಅಕ್ರಮ ಸಂಬಂಧ ಆರೋಪ- ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ…

68
firstsuddi

ಬೆಂಗಳೂರು: ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಗರದ ರಾಜಗೋಪಾಲನಗರದಲ್ಲಿ ನಡೆದಿದೆ.

ಕಾವ್ಯ ಮೃತ ಗೃಹಿಣಿ. ಮಗಳು ನೇಣಿಗೆ ಶರಣಾಗಲು ಪತಿಯ ಅಕ್ರಮ ಸಂಬಂಧವೇ ಕಾರಣ ಎಂದು ಕಾವ್ಯ ಪೋಷಕರು ಆರೋಪಿಸಿದ್ದಾರೆ. ಪತಿ ಪ್ರವೀಣ್ ಮತ್ತು ಆತನ ಪೋಷಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮೃತ ಕಾವ್ಯ ಮೂಲತಃ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದವರು. ಪ್ರವೀಣ ಮತ್ತು ಕಾವ್ಯ ವಿವಾಹವಾಗಿ ಎರಡು ವರ್ಷ ಕಳೆದಿದೆ. ದಂಪತಿಗೆ ಒಂದು ವರ್ಷದ ಮಗುವಿದೆ.

ಮೃತ ಕಾವ್ಯಳ ಪತಿ ಪ್ರವೀಣ್, ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ. ಆದರೆ ಎಲ್ಲಿಯೂ ಕೆಲಸಕ್ಕೆ ಹೋಗುತ್ತಿರಲಿಲ್ಲ. ಆದರೆ ಅಳಿಯನ ಜೊತೆ ಹುಡುಗಿಯೊಬ್ಬಳ ಅಕ್ರಮ ಸಂಬಂಧವಿತ್ತು. ಹೆಂಡತಿ, ಮಗುವಿಗಿಂತ ಅವಳೇ ಅಳಿಯನಿಗೆ ಹೆಚ್ಚಾಗಿದ್ದಳು. ಈ ಬಗ್ಗೆ ಪ್ರಶ್ನೆ ಮಾಡಿದರೆ ತಂಗಿ ಎಂದು ಹೇಳಿದ್ದ. ಕುಟುಂಬಸ್ಥರೇ ಮೃತದೇಹವನ್ನು ಕೆಳಗಿಳಿಸಿದ್ದಾರೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.

ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.