ಪತ್ನಿ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಪತಿ.

52
firstsuddi

ಕೊಪ್ಪಳ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಬುಡಶೆಡ್ನಾಳ್ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮವ್ವಾ ವಾಲಿಕಾರ್ (36) ಕೊಲೆಯಾದವರು. ನಿಂಗಪ್ಪ ವಾಲಿಕಾರ್ (40) ಆತ್ಮಹತ್ಯೆ ಮಾಡಿಕೊಂಡವರು. ಕುಡಿತದ ಚಟಕ್ಕೆ ದಾಸನಾಗಿದ್ದ ನಿಂಗಪ್ಪ ಅನೇಕ ಕಡೆ ಸಾಲ ಮಾಡಿದ್ದನು. ಕುಡಿದು ಬಂದು ನಿತ್ಯ ಪತ್ನಿ ಜೊತೆ ಗಲಾಟೆ ಮಾಡುತ್ತಿದ್ದನು.

ನಿನ್ನೆ ತಡರಾತ್ರಿ ಮಲಗಿದ್ದ ಪತ್ನಿ ಲಕ್ಷ್ಮವ್ವಾಳ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪತಿ ನಿಂಗಪ್ಪ ವಾಲಿಕಾರ್ ಹತ್ಯೆ ಮಾಡಿದ್ದಾನೆ. ಈ ವೇಳೆ ಗ್ರಾಮಸ್ಥರು ಲಕ್ಷ್ಮವ್ವಾಳನ್ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಲಕ್ಷ್ಮವ್ವಾ ಸಾವನ್ನಪ್ಪಿದ್ದಾಳೆ. ಬಳಿಕ ಪತಿ ನಿಂಗಪ್ಪ ವಾಲಿಕಾರ್ ಗ್ರಾಮದ ಹೊರವಲಯ ಜಮೀನಿನಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಕುರಿತು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.