ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿದ ಪತಿ…

68
firstsuddi

ಪಾಟ್ನಾ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿಸಿರುವ ಘಟನೆ ಬಿಹಾರದ ನವಾಡ ಜಿಲ್ಲೆಯ ನಾರ್ಡಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಕಹುರಾ ಗ್ರಾಮದಲ್ಲಿ ನಡೆದಿದೆ.

ಮಹಿಳೆಯ ಪ್ರೇಮಿ ನಾವಡಾದ ನಾರ್ಡಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಮಾಪ್ನಾ ಗರ್ಹಿಯಾ ಗ್ರಾಮದ ನಿವಾಸಿ. ಆತನಿಗೆ ವಿವಾಹವಾಗಿದ್ದು 3 ಮಕ್ಕಳ ತಂದೆ. ಮಹಿಳೆ ಕಹುರಾ ಗ್ರಾಮದ ನಿವಾಸಿಯಾಗಿದ್ದು, ಅವಳಿಗೆ ಇಬ್ಬರು ಮಕ್ಕಳಿದ್ದಾರೆ.

ಪತಿ ರಾತ್ರಿ ಕೆಲಸದ ಮೇಲೆ ಪರ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಮಹಿಳೆಯನ್ನು ಭೇಟಿಯಾಗಲು ಆಕೆಯ ಪ್ರೇಮಿ ಮನೆಗೆ ಬಂದಿದ್ದ, ಆಗ ಕುಟುಂಬದವರ ಕೈಗೆ ಸಿಕ್ಕಿ ಬಿದ್ದಿದ್ದರು. ಕುಟುಂಬದ ಸದಸ್ಯರು ಆ ವ್ಯಕ್ತಿಯನ್ನು ಥಳಿಸಿ ಇಬ್ಬರನ್ನೂ ಊರು ಬಿಟ್ಟು ಹೋಗುವಂತೆ ಒತ್ತಾಯಿಸಿದ್ದಾರೆ.

ಮಹಿಳೆಯ ಪತಿ ಹಿಂದಿರುಗಿ ಬಂದಾಗ ವಿಷಯ ತಿಳಿದು ದೇವಸ್ಥಾನಕ್ಕೆ ಕರೆದೊಯ್ದು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾರೆ. ಇವರಿಬ್ಬರ ಮದುವೆ ವೀಡಿಯೊ ವೈರಲ್ ಆಗಿದೆ. ವೀಡಿಯೊದಲ್ಲಿ ಪ್ರೇಮಿ, ಮಹಿಳೆಗೆ ಸಿಂಧೂರ ಇಡುತ್ತಿದ್ದಾನೆ. ಆತನ ಮೈ, ಕೈಗೆಲ್ಲ ಗಾಯಗಳಾಗಿರೋದನ್ನು ನೋಡಬಹುದು. ಮಹಿಳೆ ಒಂದೇ ಸಮನೆ ಅಳ್ಳುತ್ತಿದ್ದರೆ, ಆಕೆಯ ಕತ್ತು ಹಿಡಿದು ಬಲವಂತವಾಗಿ ಸಿಂಧೂರ ಇಡಿಸಲಾಗುತ್ತಿದೆ.

ಆದರೆ ಘಟನೆಯ ಬಗ್ಗೆ ಅವರ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.