ಪಬ್-ಜಿ ಬ್ಯಾನ್: ಮನನೊಂದು ಯುವಕ ಆತ್ಮಹತ್ಯೆಗೆ ಶರಣು…

155
firstsuddi

ಕೊಲ್ಕಾತ್ತಾ : ಇತ್ತೀಚೆಗೆ ಭಾರತದಲ್ಲಿ ನಿಷೇಧಿಸಲಾಗಿರುವ ಪಬ್-ಜಿ ಗೇಮ್ ಆಟವಾಡಲು ಸಾಧ್ಯವಾಗದ ಹಿನ್ನೆಲೆ, ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ. ಪ್ರೀತಮ್ ಹಾಲ್ಡರ್(21) ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರುತಿಸಲಾಗಿದೆ. ಮೃತ ಯುವಕ ಶುಕ್ರವಾರ ಬೆಳಿಗ್ಗೆ ಉಪಹಾರ ಸೇವಿಸಿ ರೂಮ್ ಸೇರಿಕೊಂಡಿದ್ದು, ಬಳಿಕ ಮಧ್ಯಾಹ್ನ ಯುವಕನ ತಾಯಿ ಊಟಕ್ಕೆ ಕರೆಯಲು ಹೋದಾಗ ಯುವಕ ಬಾಗಿಲು ತೆರೆಯದೇ ಇದ್ದಾಗ ತಾಯಿ ನೆರೆಹೊರೆಯವರನ್ನು ಕರೆದು ಬಾಗಿಲು ಹೊಡೆದು ಒಳಗೆ ಪ್ರವೇಶಿಸಿ ನೋಡಿದಾಗ ಯುವಕ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತನ್ನ ಮಗ ಪ್ರತಿದಿನ ರಾತ್ರಿ ಪಬ್-ಜಿ ಆಟವಾಡುತ್ತಿದ್ದ. ಈಗ ಪಬ್-ಜಿ ಗೇಮ್ ಬ್ಯಾನ್ ಆಗಿದ್ದರಿಂದ ಆಡಲು ಸಾಧ್ಯವಾಗದ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಯುವಕನ ತಾಯಿ ಹೇಳಿದ್ದಾರೆ.