ಪವರ್ ಬೆಗ್ಗರ್ಸ್ ಬಗ್ಗೆ ನಾವು ಮಾತನಾಡಲ್ಲ : ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್.

94
firstsuddi

ಬೆಂಗಳೂರು : ನರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಸಿಎಂ ಪುತ್ರ ಬಿ.ವೈ. ವಿಜಯೇಂದ್ರ ದೆಹಲಿ ಭೇಟಿ ವಿಚಾರದ ಕುರಿತು ಪ್ರತಿಕ್ರಿಯಿಸಿ, ಇವರೆಲ್ಲರು ಪವರ್ ಬೆಗ್ಗರ್ಸ್. ಈ ಪವರ್ ಬೆಗ್ಗರ್ಸ್ ಬಗ್ಗೆ ನಾವು ಮಾತನಾಡಲ್ಲ. ಯಡಿಯೂರಪ್ಪ ಎಲ್ಲರನ್ನು ಕರೆತಂದರು, ಈಗ ಅವರೇ ಅನುಭವಿಸುತ್ತಿದ್ದಾರೆ. ಯಾರು ಎಲ್ಲಿಗೆ ಬೇಕಾದ್ರೂ ಹೋಗಲಿ. ನಾವು ಮಾಡಿದ್ದೇ ನಾವು ಅನುಭವಿಸುತ್ತಿದ್ದೇವೆ ಎಂದರು.

ಸರ್ಕಾರದ ಪ್ಯಾಕೇಜ್ ಘೋಷಣೆ ವಿಚಾರದ ಸಂಬಂಧ ಮಾತನಾಡಿದ ಅವರು, ಇದು ರಿಯಲ್ ಪ್ಯಾಕೇಜ್ ಅಲ್ಲ, ರೀಲ್ ಪ್ಯಾಕೇಜ್. ಅಸಂಘಟಿತ ಕಾರ್ಮಿಕರು, ನೇಕಾರ, ಕುಂಬಾರರಿದ್ದಾರೆ. ಯಾರು ಪರಿಹಾರಕ್ಕೆ ಅರ್ಜಿ ಹಾಕ್ತಾರೆ. ನಿಜವಾಗಿ ಸಂಕಷ್ಟಕ್ಕೊಳಗಾದವರು ಅರ್ಜಿ ಹಾಕೋಕೆ ಆಗುತ್ತಾ..? ಅವರಿಗೆ ಏನು ಎತ್ತ ಅನ್ನೋದೇ ಗೊತ್ತಾಗಲ್ಲ. ಯಾವ ಆನ್ ಲೈನ್ ಅರ್ಜಿ ಹಾಕೋಕೆ ಸಾಧ್ಯ. ಇದೆಲ್ಲ ಗೊತ್ತಿದ್ದರೆ ವಿಧಾನಸೌಧಕ್ಕೆ ಬಂದು ಕೆಲಸ ಮಾಡ್ತಿದ್ರು. ಗೊತ್ತಿಲ್ಲದ್ದಕ್ಕೆ ತಾನೇ ಬೀದಿಬದಿಯಲ್ಲಿ ವ್ಯಾಪಾರ ಮಾಡ್ತಿರೋದು ಎಂದರು.

ಕೊರೊನಾ ಸಾವಿನ ಬಗ್ಗೆ ಸುಳ್ಳು ಅಂಕಿ-ಅಂಶ ಕೊಡ್ತಿಲ್ಲ ಎಂಬ ಸುಧಕಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಸುಧಕಾರ್ ಅಣ್ಣಾ ನೀನು ಔಷಧಿ ಕೊಡಿಸೋದನ್ನ ನೋಡು. ಡೆತ್ ಆಡಿಟ್ ಕೆಲಸ ನಿನಗೆ ಬೇಡ. ಅದನ್ನ ಮುನ್ಸಿಪಲ್, ರೆವಿನ್ಯೂ ಡಿಪಾಟ್ರ್ಮೆಂಟ್ ನೋಡಿಕೊಳ್ಳುತ್ತೆ. ಔಷಧಿ ವ್ಯಾಕ್ಸಿನ್ ಕೊಡಿಸೋ ಕೆಲಸ ಮಾಡು. ರಾಜಸ್ಥಾನದಲ್ಲಿ ಡೆತ್ ಆಡಿಟ್ ಮಾಡಿಸ್ತಿದ್ದಾರೆ, ನೀವು ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.

ನಿನ್ನೆ ಸಿನಿಮಾದವರು ನನ್ನನ್ನು ಭೇಟಿ ಮಾಡಿದ್ದರು, ಅವರ ನೋವು, ದುಃಖ ಎಲ್ಲವನ್ನೂ ಹೇಳಿದ್ದಾರೆ. ಉತ್ತರ ಕರ್ನಾಟಕದ ರೈತರ ಪರಿಸ್ಥಿತಿ ಅಯೋಮಯವಾಗಿದೆ. ಅವರನ್ನು ಯಾರು ಕಾಪಾಡಬೇಕೋ ಗೊತ್ತಿಲ್ಲ. ನಾನು ಖುದ್ದಾಗಿ ನಿನ್ನೆ ಅಲ್ಲಿಗೆ ಭೇಟಿ ನೀಡಿದ್ದೇನೆ. ನಾನು ಸಿಎಂಗೆ ಮನವಿ ಮಾಡುತ್ತೇನೆ, ರೈತರ ತರಕಾರಿ, ಹೂ ಎಲ್ಲವನ್ನೂ ನೀವೇ ಖರೀದಿ ಮಾಡಿ. ಎಷ್ಟು ದರಕ್ಕೆ ಖರೀದಿ ಮಾಡ್ತೀರೋ ಮಾಡಿ. ಕೃಷಿ, ತೋಟಗಾರಿಕೆ ಇಲಾಖೆಯಿಂದ ಖರೀದಿಸಿ. ಎಂದು ಹೇಳಿದರು.

ದೇವೇಗೌಡರು ಪ್ರಧಾನಿಯಾಗಿ 25 ವರ್ಷ ಪೂರೈಸಿದ್ದಾರೆ. ದೆಹಲಿಯಲ್ಲಿ ದಕ್ಷಿಣದವರು ರಾಜಕಾರಣ ಮಾಡಲು ಸಾಧ್ಯವಿಲ್ಲ. ಅಂತದ್ದರಲ್ಲಿ ಇವರು ಪ್ರಧಾನಿಯಾಗಿದ್ದರು. ಅವರ ಉತ್ಸಾಹವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದರು.