ಪಾಕ್ ಪ್ರಧಾನಿ ಇಮ್ರಾನ್ ಖಾನ್ ನನ್ನ ಹಿರಿಯ ಸಹೋದರ – ವಿವಾದ ಸೃಷ್ಟಿಸಿತು ನವಜೋತ್ ಸಿಂಗ್ ಸಿಧು ಹೇಳಿಕೆ…

92
firstsuddi

ನವದೆಹಲಿ : ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು, ವಿವಾದ್ಮತಕ ಹೇಳಿಕೆ ನೀಡಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.

ನವೆಂಬರ್ 18ರಂದು ಪಾಕ್ ನ ಕರ್ತಾರ್ ಪುರ್ ಸಾಹಿಬ್ ಗೆ ಭೇಟಿ ನೀಡಿದ್ದ ನವಜೋತ್ ಸಿಂಗ್ ಸಿಧು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಮ್ಮ ಹಿರಿಯ ಸಹೋದರ ಎಂದು ಹೊಗಳಿದ್ದರು.

ಇನ್ನೂ ಈ ವೀಡಿಯೋವನ್ನು ಭಾರತೀಯ ಜನತಾ ಪಕ್ಷದ ನಾಯಕ ಅಮಿತ್ ಮಾಳವಿಯಾ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ರಾಹುಲ್ ಗಾಂಧಿ ಅವರ ನೆಚ್ಚಿನ ನವಜೋತ್ ಸಿಂಗ್ ಸಿಧು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನ ಹಿರಿಯ ಸಹೋದರ ಎಂದು ಕರೆದಿದ್ದಾರೆ. ಕಳೆದ ಬಾರಿ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಅವರನ್ನು ತಬ್ಬಿಕೊಂಡಿದ್ದರು ಎಂದು ಕ್ಯಾಪ್ಷನ್ ನಲ್ಲಿ ಬರೆದುಕೊಂಡಿದ್ದಾರೆ.

2018ರಲ್ಲಿ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ನವಜೋತ್ ಸಿಂಗ್ ಸಿಧು ಅವರು ಪಾಕ್ ನ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಅವರನ್ನ ತಬ್ಬಿಕೊಂಡು ವಿವಾದದಲ್ಲಿ ಸಿಲುಕಿದ್ದರು.