ಪಾಕ್ ಸೇನೆಯ ಗುಂಡಿಗೆ ಭಾರತೀಯ ಯೋಧ ಹುತಾತ್ಮ…

220
firstsuddi

ಶ್ರೀನಗರ : ಗಡಿಯಲ್ಲಿ ಪಾಕ್ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಲೇ ಇದ್ದು, ಪಾಕ್ ಸೇನೆಯ ಗುಂಡಿಗೆ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಕಳೆದ ರಾತ್ರಿಯಿಂದ ಜಮ್ಮು ಕಾಶ್ಮೀರಾದ ರಜೌರಿ, ಕತುವಾ ಹಾಗೂ ಪೂಂಚ್ ಜಿಲ್ಲೆಗಳ ಕೆರಿ, ಬಾಲಾಕೋಟ್, ಮಂಜಕೋಟೆ ಹಾಗೂ ಕರೊಲ್ ಮೈಟ್ರಾನ್ ಎಂಬ ಪ್ರದೇಶಗಳಲ್ಲಿ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಬಂದು ಶಸ್ತ್ರಾಸ್ತ್ರ ಹಾಗೂ ಶೆಲ್ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ಕೂಡಾ ದಾಳಿ ನಡೆಸಿದ್ದಾರೆ. ಆದರೆ ಪಾಕ್ ಸೈನಿಕರ ಗುಂಡಿನ ದಾಳಿಗೆ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಹಾಗೂ ದಾಳಿಯಲ್ಲಿ ಓರ್ವ ನಾಗರಿಕರು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.