ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ-ನಾಲ್ವರು ನಾಗರೀಕರು ಹಾಗೂ ಇಬ್ಬರು ಯೋಧರು ಹುತಾತ್ಮ…

107
firstsuddi

ಶ್ರೀನಗರ : ಗಡಿಯಲ್ಲಿ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಪಾಕ್ ಸೈನಿಕರ ಗುಂಡಿನ ದಾಳಿಗೆ ಓರ್ವ ಬಿ.ಎಸ್.ಎಫ್ ಸಬ್ ಇನ್ಸ್‍ಪೆಕ್ಟರ್ ಸೇರಿದಂತೆ ಇಬ್ಬರು ಯೋಧರು ಹುತಾತ್ಮರಾಗಿದ್ದು, ಈ ದಾಳಿಯಲ್ಲಿ ನಾಲ್ವರು ನಾಗರೀಕರು ಮೃತಪಟ್ಟಿದ್ದಾರೆ. ಪಾಕಿಸ್ತಾನ ಸೈನಿಕರು ಇಂದು ಬೆಳಿಗ್ಗೆಯಿಂದ ಬಾರಾಮುಲ್ಲಾ ಹಾಗೂ ಪಾಕ್ ಗಡಿ ಭಾಗದ ಹಲವು ಜಿಲ್ಲೆಗಳು, ಬಂಡಿಪೋರಾದ ಸೌರೇಜ್, ಕುಪ್ವಾರಾದ ಕೆರನ್ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘಿಸಿ ಶೆಲ್ ಗಳ ದಾಳಿ ನಡೆಸಿದ್ದು, ನಮ್ಮ ಭಾರತೀಯ ಯೋಧರು ಕೂಡಾ ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿದ್ದಾರೆ. ಈ ವೇಳೆ ಪಾಕ್ ಗುಂಡಿನ ದಾಳಿಗೆ ಇಬ್ಬರು ಯೋಧರು ನಾಲ್ವರು ನಾಗರೀಕರು ಹುತಾತ್ಮರಾಗಿದ್ದಾರೆ.
ಗಡಿಯಲ್ಲಿ ಗುಂಡಿನ ದಾಳಿ ಹೆಚ್ಚಾಗುತ್ತಿರುವುದರಿಂದ ಅಂಗಡಿಗಳನ್ನು ಬಂದ್ ಮಾಡಿಸಿ ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಸೇನಾ ಮೂಲಗಳಿಂದ ತಿಳಿದು ಬಂದಿದೆ.