ಪಾರ್ಟಿ ನೆಪದಲ್ಲಿ ಕಾಶ್ಮೀರ ಮೂಲದ ಯುವತಿಯರ ಮೇಲೆ ಅತ್ಯಾಚಾರ ಯತ್ನ – ಇಬ್ಬರ ಬಂಧನ…

80
firstsuddi

ಬೆಂಗಳೂರು : ಪಾರ್ಟಿ ಮಾಡುವ ನೆಪದಲ್ಲಿ ಕಾಶ್ಮೀರ ಮೂಲದ ಇಬ್ಬರು ಯುವತಿಯರನ್ನು ರೂಮ್ ಗೆ ಕರೆಸಿಕೊಂಡು ಅವರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಘಟನೆ ಬೆಂಗಳೂರಿನ ವಿವೇಕನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಒಂದೇ ಕಾಲೇಜಿನಲ್ಲಿ ಜೊತೆಯಾಗಿ ವಿದ್ಯಾಭ್ಯಾಸ ಮುಗಿಸಿದ್ದ ಈ ನಾಲ್ವರು ಪರಿಚಯಸ್ಥರು. ಓದು ಮುಗಿಸಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಫೆ.5ರಂದು ಪಾರ್ಟಿ ಮಾಡುವ ನೆಪದಲ್ಲಿ ಇಬ್ಬರು ಯುವಕರು ತಮ್ಮ ಇಬ್ಬರು ಸ್ನೇಹಿತೆಯರನ್ನ ರೂಮಿಗೆ ಕರೆದಿದ್ದಾರೆ. ಮಧ್ಯರಾತ್ರಿ 2 ಗಂಟೆವರೆಗೂ ಮದ್ಯ ಸೇವಿಸಿದ್ದಾರೆ. ಬಳಿಕ ಇಬ್ಬರು ಯುವತಿಯರ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ವೇಳೆ ಒಬ್ಬಳು ಬಾತ್ ರೂಮ್ ಸೇರಿಕೊಂಡಿದ್ದಾಳೆ, ಮತ್ತೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಯುವತಿಯರು ವಿವೇಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.