ಪುಟಿನ್‍ನನ್ನು ಬಂಧಿಸಿದವರಿಗೆ 7.5 ಕೋಟಿ ರೂ. ಬಹುಮಾನ ಘೋಷಿಸಿದ ರಷ್ಯಾ ಉದ್ಯಮಿ.

53
firstsuddi

ಮಾಸ್ಕೋ : ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿಯನ್ನು ವಿಶ್ವದ ಇತರ ದೇಶಗಳು ಮಾತ್ರವಲ್ಲದೇ ರಷ್ಯಾ ಕೂಡಾ ವಿರೋಧಿಸುತ್ತಿದೆ. ಇದರ ಮಧ್ಯೆ ರಷ್ಯಾದ ಉದ್ಯಮಿಯೊಬ್ಬರು ಪುಟಿನ್ ನನ್ನು ಬಂಧಿಸಿದವರಿಗೆ 7.5 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ.

ರಷ್ಯಾದ ಮಾಸ್ಕೋ ಮೂಲದ ಉದ್ಯಮಿ ಅಲೆಕ್ಸ್ ಕೋನನಿಖಿನ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಪುಟಿನ್ ಅವರನ್ನು ರಷ್ಯಾದ ಹಾಗೂ ಅಂತಾರಾಷ್ಟ್ರೀಯ ಕಾನೂನುಗಳ ಅಡಿಯಲ್ಲಿ ಯುದ್ಧ ಅಪರಾಧಿ ಎಂದು ಬಂಧಿಸಿದ ಅಧಿಕಾರಿಗೆ ನಾನು 10 ಲಕ್ಷ ಡಾಲರ್(7.5 ಕೋಟಿ ರೂ.) ನೀಡುವುದಾಗಿ ಭರವಸೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.