ಪಾಟ್ನಾ : ಬೀದಿಗಳಲ್ಲಿ ಪೆನ್ನು ಮಾರಾಟ ಮಾಡುತ್ತಿದ್ದ ಬಡ ಹುಡುಗಿಗೆ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಐಪೋನ್ ಉಡುಗೊರೆಯಾಗಿ ನೀಡಿದ್ದಾರೆ. ಇದರ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಶನಿವಾರ ಸಂಜೆ ವೇಳೆ ತೇಜ್ ಪ್ರತಾಪ್ ತನ್ನ ಸ್ನೇಹಿತರೊಂದಿಗೆ ಪಾಟ್ನಾದ ಬೋರಿಂಗ್ ರೋಡ್ ಪ್ರದೇಶದಲ್ಲಿ ಸುತ್ತಾಡುತ್ತಿದ್ದ ವೇಳೆ ರಸ್ತೆಯಲ್ಲಿ ಚಿಕ್ಕ ಬಾಲಕಿಯೊಬ್ಬಳು ಪೆನ್ನು ಮಾರಾಟ ಮಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ತೆರಳಿದ ತೇಜ್ ಪ್ರತಾಪ್ ಆಕೆಯ ಜೊತೆ ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ.
ಈ ವೇಳೆ ತನ್ನ ಮೊಬೈಲ್ ಸಂಖ್ಯೆಯನ್ನ ಬಾಲಕಿಗೆ ನೀಡಿ, ಅಗತ್ಯ ಸಹಾಯಕ್ಕಾಗಿ ಕರೆ ಮಾಡುವಂತೆ ತಿಳಿಸಿದ್ದಾನೆ. ಈ ವೇಳೆ, ಬಾಲಕಿ ತನ್ನ ಬಳಿ ಮೊಬೈಲ್ ಇಲ್ಲ ಎಂದು ತಿಳಿಸಿದ್ದಾಳೆ. ಆಗ ಪಕ್ಕದ ಮೊಬೈಲ್ ಶಾಪ್ ಗೆ ಬಾಲಕಿಯನ್ನ ಕರೆದುಕೊಂಡು ಹೋಗಿ 50 ಸಾವಿರ ರೂ. ಮೌಲ್ಯದ ಐಫೋನ್ ಗಿಪ್ಟ್ ಮಾಡಿದ್ದಾರೆ. ಈ ವೇಳೆ, ತನ್ನ ವಿದ್ಯಾಭ್ಯಾಸಕ್ಕಾಗಿ ಈ ಫೋನ್ ಬಳಕೆ ಮಾಡಿಕೊಳ್ಳುವ ಭರವಸೆ ನೀಡಿದ್ದಾಳೆ.










