ಕೊಪ್ಪಳ : ಪೈಪಲೈನ್ ಕಾಮಗಾರಿಗೆಂದು ಅಗೆದಿದ್ದ ಗುಂಡಿಗೆ ಮಗು ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುರುಡಿ ಗ್ರಾಮದಲ್ಲಿ ನಡೆದಿದೆ.
ಜಲಜೀವನ್ ಮಿಷನ್ ಪೈಪಲೈನ್ ಅಳವಡಿಕೆಗೆ ಕಾಮಗಾರಿ ಮಾಡಲಾಗಿತ್ತು. ಕಳೆದ ಒಂದು ತಿಂಗಳ ಹಿಂದೆ ಈ ಗುಂಡಿಯನ್ನು ಅಗೆಯಲಾಗಿತ್ತು. ಅಗೆದಿದ್ದ ಗುಂಡಿಯ ಹತ್ತಿರ ಆಟವಾಡಲು ತೆರಳಿದ್ದ 13 ತಿಂಗಳ ಅನುಪಮಾ ಗುಂಡಿಗೆ ಬಿದ್ದಿದ್ದಾಳೆ.
ಅನುಪಮಾ ಗುಂಡಿಯಲ್ಲಿ ಬಿದ್ದ ಕಾರಣ ಅವಳ ಉಸಿರು ಗಟ್ಟಿತ್ತು. ಆಸ್ಪತ್ರೆಗೆ ಸಾಗಿಸುವ ರಸ್ತೆ ಮಧ್ಯೆಯೇ ಸಾವನ್ನಪ್ಪಿದ್ದಾಳೆ. ಅನುಪಮಾ ಸಾವಿಗೆ ಕಾಮಗಾರಿಯ ಗುತ್ತಿಗೆದಾರನೇ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೂಲತಃ ಕೊಪ್ಪಳ ತಾಲೂಕಿನ ಶಿವಪುರ ನಿವಾಸಿಯಾದ ಅನುಪಮಾ ಅಜ್ಜಿ ಮನೆಗೆ ಬಂದಿದ್ದಾಗ ಈ ಘಟನೆ ನಡೆದಿದೆ. ಬೇವೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










