ಪೋಷಕರು ಗೇಮ್ ಆಡಬೇಡ ಎಂದು ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಬಾಲಕ ಆತ್ಮಹತ್ಯೆಗೆ ಶರಣು…

144
firstsuddi

ಚೆನ್ನೈ : ಪೋಷಕರು ಮೊಬೈಲ್ ಅನ್ನು ಹೆಚ್ಚು ಬಳಸಬೇಡ ಎಂದಿದ್ದಕ್ಕೆ ಮನನೊಂದು ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ನಡೆದಿದೆ. ದೇಶಾದ್ಯಂತ ಮಹಾಮಾರಿ ಕೊರೊನಾ ಅಟ್ಟಹಾಸದಿಂದ ಲಾಕ್‍ಡೌನ್ ಮಾಡಲಾಗಿದ್ದ ವೇಳೆ 16 ವರ್ಷದ ಬಾಲಕ ಮೊಬೈಲ್‍ನಲ್ಲಿ ಹೆಚ್ಚು ಗೇಮ್ ಆಡುವ ಮೂಲಕ ಮೊಬೈಲ್ ಗೇಮ್‍ಗಳಿಗೆ ದಾಸನಾಗಿದ್ದ. ಪೋಷಕರು ಎಷ್ಟು ಆಡಬೇಡ ಎಂದು ಹೇಳಿದರೂ ಬಾಲಕ ಆಡುವುದನ್ನು ನಿಲ್ಲಿಸಿರಲಿಲ್ಲ. ಇದರಿಂದಾಗಿ ಪೋಷಕರು ಇತ್ತೀಚೆಗೆ ಇನ್ನು ಮುಂದೆ ಗೇಮ್ ಆಡಬಾರದೆಂದು ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ತೀವ್ರವಾಗಿ ನೊಂದಿದ್ದ ಬಾಲಕ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೋಷಕರು ಮನೆಗೆ ಬಂದು ಮಗನ ಮೃತದೇಹವನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಬಳಿಕ ಪುದೂರ್ ಪೊಲೀಸರಿಗೆ ಘಟನೆ ಕುರಿತು ಮಾಹಿತಿಯನ್ನು ತಿಳಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.