ಪ್ಯಾರಾಚೂಟ್ ನ ಹಗ್ಗ ತುಂಡಾಗಿ ಸಮುದ್ರಕ್ಕೆ ಬಿದ್ದ ದಂಪತಿ – ವಿಡಿಯೋ ವೈರಲ್…

87
firstsuddi

ದಿಯು : ಪ್ಯಾರಾಸೈಲಿಂಗ್ ಮಾಡುತ್ತಿದ್ದಾಗ ಪ್ಯಾರಾಚೂಟ್ ನ ಹಗ್ಗ ತುಂಡಾಗಿ ದಂಪತಿ ಸಮುದ್ರಕ್ಕೆ ಬಿದ್ದಿದ್ದಾರೆ. 

ಗುಜರಾತ್ ಮೂಲದ ಅಜಿತ್ ಕಥಾಡ್ ಮತ್ತವರ ಪತ್ನಿ ಸರಳಾ ಕಥಾಡ್ ಕಳೆದ ಭಾನುವಾರ ದಿಯುವಿನ ನಾಗೋವಾ ಬೀಚ್ ನಲ್ಲಿ ಪ್ಯಾರಾಸೈಲಿಂಗ್ ಮಾಡುತ್ತಿದ್ದಾಗ ಪ್ಯಾರಾಚೂಟ್ ನ ಹಗ್ಗ ತುಂಡಾದ ಪರಿಣಾಮ ಸಮುದ್ರಕ್ಕೆ ಬಿದ್ದಿದ್ದಾರೆ. ಕೂಡಲೇ ಇದನ್ನು ಗಮಿಸಿದ ಬೀಚ್ ನ ಲ್ಲಿದ್ದ ಜೀವರಕ್ಷಕ ಸಿಬ್ಬಂದಿ ದಂಪತಿಯನ್ನು ರಕ್ಷಿಸಿದ್ದಾರೆ. ಲೈಫ್ ಜಾಕೆಟ್ ಧರಿಸಿದ್ದ ಪರಿಣಾಮ ಯಾವುದೇ ಅಪಾಯ ಸಂಭವಿಸಿಲ್ಲ. ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ದಂಪತಿ ಸಮುದ್ರಕ್ಕೆ ಧುಮುಕುತ್ತಿದ್ದಂತೆ ಪವರ್‌ಬೋಟ್‌ನಲ್ಲಿದ್ದ ಅಜಿತ್ ಕ್ಯಾಥಡ್ ಅವರ ಸಹೋದರ ರಾಕೇಶ್ ಕಥಾಡ್ ಜೋರಾಗಿ ಕಿರುಚಾಡಿದ್ದಾರೆ. ನಾನು ವೀಡಿಯೊ ರೆಕಾರ್ಡ್ ಮಾಡುತ್ತಿದ್ದೆ, ನನ್ನ ಸಹೋದರ ಮತ್ತು ಅತ್ತಿಗೆ ಬಹಳ ಎತ್ತರದಿಂದ ಸಮುದ್ರಕ್ಕೆ ಬೀಳುವುದನ್ನು ನಾನು ನೋಡಿದೆ. ಆ ಕ್ಷಣದಲ್ಲಿ ನಾನು ಏನು ಮಾಡಬೇಕೆಂದು ನನಗೆ ತೋಚಲಿಲ್ಲ ಎಂದು ರಾಕೇಶ್ ಘಟನೆಯನ್ನು ವಿವರಿಸಿದ್ದಾರೆ.