ಪ್ರತಿಷ್ಠಿತ ಬ್ರ್ಯಾಂಡ್ ಹೆಸರಿನಡಿ ನಕಲಿ ಬಟ್ಟೆ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಸಿಸಿಬಿ ದಾಳಿ…

61
firstsuddi

ಬೆಂಗಳೂರು: ಪ್ರತಿಷ್ಠಿತ ಬ್ರ್ಯಾಂಡ್ ನ ಹೆಸರಿನಡಿ ನಕಲಿ ಬಟ್ಟೆಗಳನ್ನು ಮಾರಾಟ ಮಾಡುತ್ತಿದ್ದ ನಗರದ ವ್ಯವಸ್ಥಾಪಕರ ಅಂಗಡಿ, ಗೋದಾಮಿನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಬೊಮ್ಮನಹಳ್ಳಿ ಮತ್ತು ಕೆಆರ್ ಮಾರ್ಕೆಟ್ ಬಳಿ ಗಾರ್ಮೆಂಟ್ಸ್ ಮಾದರಿಯಲ್ಲಿ ಹಲವಾರು ಜನರನ್ನು ಕೆಲಸಕ್ಕೆ ಇಟ್ಟುಕೊಂಡು ನಕಲಿ ಬ್ರಾಂಡ್ ಬಟ್ಟೆಗಳನ್ನು ತಯಾರು ಮಾಡಲಾಗುತ್ತಿತ್ತು. ಬೊಮ್ಮನಹಳ್ಳಿಯಲ್ಲಿ ಅರ್ಮಾನಿ, ಲಿವೈಸ್, ಅಲ್ಲೆನ್ ಸೊಲ್ಲಿ, ಬುರ್ಬೆರಿ ಲೆದರ್ ಟ್ಯಾಗ್ಸ್, ಪೋಲೊ, ಎಲ್​ಪಿ ಸೇರಿದಂತೆ ವಿವಿಧ ಪ್ರತಿಷ್ಠಿತ ಬ್ರಾಂಡ್‌ಗಳ ನಕಲಿ ಬಟ್ಟೆಗಳನ್ನು ತಯಾರು ಮಾಡಲಾಗುತ್ತಿತ್ತು. ನಂತರ ಇದೆಲ್ಲವೂ ಅಸಲಿ ಎಂದು ಸಾರ್ವಜನಿಕರನ್ನು ನಂಬಿಸಿ ಮಾರಾಟ ಮಾಡುತ್ತಿದ್ದರು.

ಈ ಕುರಿತ ಖಚಿತ ಮಾಹಿತಿ ಮೇರೆಗೆ ಬೊಮ್ಮನಹಳ್ಳಿಯ ಪಟೇಲ್ ಎಕ್ಸಪೋರ್ಟ್ ಹಾಗೂ ಆರ್‌ಬಿ ಗೋಡೌನ್ ಗಳ ಮೇಲೆ ದಾಳಿ ಮಾಡಿದ ಸಿಸಿಬಿ, 1.5 ಕೋಟಿ ರೂಪಾಯಿ ಮೌಲ್ಯದ ನಕಲಿ ಬಟ್ಟೆಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.