ಪ್ರವಾದಿ ಬಗ್ಗೆ ವಿವಾದಿತ ಹೇಳಿಕೆ ; ನೂಪುರ್ ಶರ್ಮಾರನ್ನ ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್.

61
firstsuddi

ನವದೆಹಲಿ: ಪ್ರವಾದಿ ಮೊಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಪ್ರವಾದಿ ಮೊಹಮ್ಮದ್ ಅವರ ಹೇಳಿಕೆಗಳು ಗಲ್ಫ್ ರಾಷ್ಟ್ರಗಳಲ್ಲಿ ಭಾರೀ ಆಕ್ರೋಶ ಮತ್ತು ದೇಶದಲ್ಲಿ ಪ್ರತಿಭಟನೆಗಳನ್ನು ಉಂಟುಮಾಡಿದೆ. ನೂಪುರ್ ಶರ್ಮಾ ಅವರು ಇಡೀ ದೇಶದ ಕ್ಷಮೆ ಕೇಳಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ನೂಪುರ್ ಶರ್ಮಾ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್ ಐಆರ್ ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಸಲ್ಲಿಸಿದ ಮನವಿಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿದೆ. ಮಾಜಿ ಬಿಜೆಪಿ ವಕ್ತಾರೆ ತಮ್ಮ ಹೇಳಿಕೆ ವೈರಲ್ ಆದ ನಂತರ ಬೆದರಿಕೆಗಳನ್ನು ಎದುರಿಸುತ್ತಿದ್ದರು ಎಂದು ಆಕೆಯ ವಕೀಲರು ತಿಳಿಸಿದ್ದಾರೆ.

ಆಕೆಯ ಪ್ರಚೋದನಕಾರಿ ಹೇಳಿಕೆಗಳನ್ನು ನಾವು ನೋಡಿದ್ದೇವೆ. ಆದರೆ ಆಕೆ ಇದನ್ನೆಲ್ಲ ಹೇಳಿದ ರೀತಿ ಮತ್ತು ನಂತರ ತಾನು ವಕೀಲೆ ಎಂದು ಹೇಳಿಕೊಂಡಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಅವರು ಇಡೀ ದೇಶದ ಕ್ಷಮೆ ಕೇಳಬೇಕು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ವಾಗ್ದಾಳಿ ನಡೆಸಿದ್ದಾರೆ.

ನೂಪುರ್ ಶರ್ಮಾ ಬೇಜವಾಬ್ದಾರಿ ಹೇಳಿಕೆಯೇ ಉದಯಪುರ ಘಟನೆಗೆ ಕಾರಣ. ನೂಪುರ್ ಶರ್ಮಾ ಹೇಳಿಕೆ ಹಿಂತೆಗೆದುಕೊಂಡಿದ್ದು ಬಹಳ ತಡವಾಗಿ. ನೂಪುರ್ ಶರ್ಮಾ ದೂರಿನ ಆಧಾರದ ಮೇಲೆ ಓರ್ವ ವ್ಯಕ್ತಿಯ ಬಂಧನ ಆಗಿದೆ. ಆದರೆ ನೂಪೂರ್ ಶರ್ಮಾ ವಿರುದ್ಧ ಡಜನ್ ಎಫ್.ಐ.ಆರ್. ದಾಖಲಾದರೂ ಬಂಧನ ಏಕಾಗಿಲ್ಲ?. ಎಂದು ಪ್ರಶ್ನೆ ಮಾಡಿದೆ. ದೇಶದಲ್ಲಿ ನಡೆಯುತ್ತಿರುವ ದುರ್ಘಟನೆಗೆ ನೂಪುರ್ ಶರ್ಮಾ ಹೊಣೆ. ನೀವು ಪಕ್ಷವೊಂದರ ವಕ್ತಾರರು. ಹೀಗಾಗಿ ನೀವು ಏನು ಬೇಕಾದರೂ ಹೇಳಲು ಸಾಧ್ಯವಿಲ್ಲ. ಎಲ್ಲ ಧರ್ಮದವರು ಎಲ್ಲ ಧರ್ಮಗಳನ್ನು ಗೌರವಿಸುತ್ತಾರೆ. ನೂಪುರ್ ಶರ್ಮಾ ಹೇಳಿಕೆಯಿಂದ ದೇಶದ ಭದ್ರತೆಗೆ ಧಕ್ಕೆ ಉಂಟಾಗಿದೆ. ನೂಪುರ್ ಶರ್ಮಾ ಒಬ್ಬರೇ ಹಿಂಸಾಚಾರಗಳಿಗೆ ಜವಾಬ್ದಾರಿ ಎಂದು ನೂಪೂರ್ ಶರ್ಮಾ ಅವರನ್ನು ಸುಪ್ರೀಂ ಕೋರ್ಟ್ ಹಿಗ್ಗಾಮಗ್ಗಾ ತರಾಟೆಗೆ ತೆಗೆದುಕೊಂಡಿತು.