ಪ್ರೇಮಿಗಳ ಹತ್ಯೆ ಮಾಡಿ, ಶವವನ್ನು ಮೊಸಳೆಗಳಿರುವ ನದಿಗೆ ಎಸೆದ ಪೋಷಕರು…

84
firstsuddi

ಮೊರೆನಾ: ಮಗಳು ಪ್ರೀತಿ ಮಾಡುವುದು ಇಷ್ಟವಿಲ್ಲದೆ ಆಕೆಯ ಕುಟುಂಬಸ್ಥರು ಪ್ರೇಮಿಗಳಿಬ್ಬರನ್ನೂ ಕೊಂದು ಶವವನ್ನು ಮೊಸಳೆಗಳಿರುವ ನದಿಗೆ ಎಸೆದಿರುವ ಘಟನೆ ಮಧ್ಯಪ್ರದೇಶದ ರತನ್​ಬಸಾಯ್ ಪ್ರದೇಶದಲ್ಲಿ ನಡೆದಿದೆ.

ಮೃತ ಬಾಲಕಿಯ ತಂದೆ ರಾಜಪಾಲ್ ಸಿಂಗ್ ಜೂನ್ 3ರಂದು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಕುಟುಂಬದ ಸದಸ್ಯರು ಚೊಟ್ಟು ತೋಮರ್ ಎಂದು ಗುರುತಿಸಿದ್ದಾರೆ. ಜೂನ್ 4ರಂದು ಅಂಬಾ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಮತ್ತೊಂದು ನಾಪತ್ತೆ ದೂರು ದಾಖಲಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದರು. ಮೃತ ಮಹಿಳೆ ಶಿವಾನಿ ಕುಟುಂಬದವರೇ ಇಬ್ಬರನ್ನೂ ಕೊಂದಿದ್ದಾರೆ, ಎಂದು ಚೊಟ್ಟು ತೋಮರ್ ಕುಟುಂಬ ಆರೋಪಿಸಿತ್ತು. ತನಿಖೆಯ ಭಾಗವಾಗಿ, ಪೊಲೀಸರು ಶಿವಾನಿಯ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದರು.

ವಿಚಾರಣೆಯ ಬಳಿಕ ಯುವತಿ ತಂದೆ ತಾನು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಜೂನ್ 3ರಂದು ಶಿವಾನಿ ಹಾಗೂ ಚೊಟ್ಟು ತೋಮರ್ ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು, ಬಳಿಕ ದೇಹಕ್ಕೆ ಕಲ್ಲು ಕಟ್ಟಿ, ಮೊಸಳೆಗಳಿರುವ ಚಂಬಲ್ ನದಿಯಲ್ಲಿ ಎಸೆಯಲಾಗಿದೆ, ಎಂದು ಒಪ್ಪಿಕೊಂಡಿದ್ದಾರೆ.