ಫರಂಗಿಪೇಟೆ: ಚಾಲಕನ‌ ನಿಯಂತ್ರಣ ತಪ್ಪಿ ಮಸೀದಿಯೊಳಗೆ ನುಗ್ಗಿದ ಕಾರು…

225
firstsuddi

ಬಂಟ್ವಾಳ: ಚಾಲಕನ‌ ನಿಯಂತ್ರಣ ತಪ್ಪಿದ ಓಮ್ನಿ ಕಾರೊಂದು ಮಸೀದಿಯ ಆವರಣ ಗೋಡೆಯೊಳಗೆ ನುಗ್ಗಿದ ಪರಿಣಾಮ ಪ್ರಯಾಣಿಕರು ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪದ 10ನೇ ಮೈಲುಕಲ್ಲು ಎಂಬಲ್ಲಿ ಮಂಗಳವಾರ ನಡೆದಿದೆ. ಓಮ್ನಿ ಕಾರು ಬಿ.ಸಿ.ರೋಡ್ ನಿಂದ ಮಂಗಳೂರು ಕಡೆಗೆ ತೆರಳುತ್ತಿರುವಾಗ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಫರಂಗಿಪೇಟೆ ಸಮೀಪದ ಹತ್ತನೇ ಮೈಲು ಕಲ್ಲು ಎಂಬಲ್ಲಿ ಚಾಲಕನ‌ ನಿಯಂತ್ರಣ ತಪ್ಪಿದೆ ಎನ್ನಲಾಗಿದೆ. ಪರಿಣಾಮ ಹೆದ್ದಾರಿ ಪಕ್ಕದಲ್ಲಿರುವ ತ್ವಾಹಾ ಜುಮಾ ಮಸೀದಿಯ ಆವರಣದೊಳಗೆ ನುಗ್ಗಿ ಇನ್ನೊಂದು ಬದಿಯ ಆವರಣ ಗೋಡೆಯಾಗಿ ಏರಿ ನಿಂತಿದೆ. ಈ ವೇಳೆ ಮಸೀದಿ ಆವರಣದಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ‌. ಘಟನೆಯಿಂದ ಕಾರಿನ ಮುಂಭಾಗ ಜಖಂಗೊಂಡಿದ್ದು, ಮಸೀದಿಗೂ ಹಾನಿಯಾಗಿದೆ. ಅಪಘಾತ ದೃಶ್ಯ ಮಸೀದಿಯ‌ ಸಿಸಿಟಿವಿಯಲ್ಲಿ ಸೆರೆಯಾಗಿದೆ.