ಬಡ್ಡಿ ಹಣದ ವಿಚಾರವಾಗಿ ಗಲಾಟೆ: ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಸಾವು…

68
firstsuddi

ತುಮಕೂರು: ಬಡ್ಡಿ ಹಣದ ವಿಚಾರವಾಗಿ ನಡೆದ ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಅಮೃತ್ತೂರು ಗ್ರಾಮದಲ್ಲಿ ನಡೆದಿದೆ.

ಅಮೃತ್ತೂರು ಗ್ರಾಮದ ಅಬ್ದುಲ್ ಖಲೀಲ್ (55) ಮೃತ ದುರ್ದೈವಿ. ಖಲೀಲ್ ತನ್ನ ಮಗಳ ಮದುವೆಗಾಗಿ ಅದೇ ಗ್ರಾಮದ ತೌಸೀಪ್ ಪಾಷ ಅವರಿಂದ 50,000 ರೂ. ಸಾಲ ಪಡೆದಿದ್ದ. ಪ್ರತಿ ತಿಂಗಳು 5 ಸಾವಿರ ಬಡ್ಡಿ ಕಟ್ಟುತ್ತಿದ್ದ. ಆದರೆ ಕಳೆದ ತಿಂಗಳು ಬಡ್ಡಿ ಹಣ ನೀಡಲು ತಡವಾಗಿದ್ದಕ್ಕೆ ತೌಸೀಪ್ ಪಾಷ ಗಲಾಟೆ ಮಾಡಿದ್ದು, ಕೋಳಿ ಕಟ್ ಮಾಡುವ ಕತ್ತಿಯಿಂದ ಹಲ್ಲೆ ಮಾಡಿದ್ದ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಖಲೀಲ್​ನನ್ನು ಬೆಂಗಳೂರಿನ ನಿಮಾನ್ಸ್ ಗೆ ದಾಖಲಿಸಲಾಗಿತ್ತು. ಆದ್ರೆ, ಇದೀಗ ಚಿಕಿತ್ಸೆ ಫಲಕಾರಿಯಾಗದೇ ಖಲೀಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

ಘಟನೆ ಸಂಬಂಧ ಅಮೃತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.