ಬಣಕಲ್ : ಸಂಬಂಧಿಕರ ಸಮ್ಮುಖದಲ್ಲಿ ಅವಳಿ ಸಹೋದರಿಯರ ಸರಳ ವಿವಾಹ…

301
firstsuddi

ಕೊಟ್ಟಿಗೆಹಾರ : ಸಾಮಾಜಿಕ ಅಂತರ, ಮುಖಗವಸು, ಸ್ಯಾನಿಟೈಸರ್ ಬಳಕೆ, ಆರೋಗ್ಯ ತಪಾಸಣೆಯ ನಡುವೆ ಬಣಕಲ್‍ನ ಗುಡ್ಡೆಟ್ಟಿಯಲ್ಲಿ ಸಂಬಂಧಿಕರ ಸಮ್ಮುಖದಲ್ಲಿ ಅವಳಿ ಸಹೋದರಿಯರು ಸರಳ ವಿವಾಹವಾದರು.
ಗುಡ್ಡೆಟ್ಟಿಯ ರಾಜು ಪೂಜಾರಿ ಹಾಗೂ ಶಾಂತಮ್ಮ ದಂಪತಿಗಳ ಪುತ್ರಿಯರಾದ ದಿವ್ಯ ಹಾಗೂ ದೀಪ್ತಿ ಹಸೆಮಣೆ ಏರಿರುವ ಅವಳಿ ಸಹೋದರಿಯರು. ವಧು ದಿವ್ಯಾಗೆ ಮೂಡಿಗೆರೆಯ ವರ ಜಗದೀಶ್ ಹಾಗೂ ದೀಪ್ತಿಗೆ ಜಾರ್‍ಗಲ್‍ನ ಪ್ರಶಾಂತ್‍ರೊಂದಿಗೆ ಮುಖಗವಸು ಧರಿಸಿ ವಧವಿನ ಸ್ವಗೃಹ ಗುಡ್ಡೆಟ್ಟಿಯಲ್ಲಿ ಸರಳ ವಿವಾಹ ಮಾಡಿಕೊಂಡರು. ಸರಳ ವಿವಾಹ ಕಾರ್ಯಕ್ರಮದಲ್ಲಿ ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಮಹಿಳಾ ಆರೋಗ್ಯ ಸಹಾಯಕಿ ಕುಮುದಾ ಮತ್ತು ಆಶಾ ಕಾರ್ಯಕರ್ತೆಯರಾದ ವಿಮಲ, ನೇತ್ರ, ಬಣಕಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ.ಸತೀಶ್, ಕೋವಿಡ್ ಕಮಿಟಿಯ ಸದಸ್ಯ ಅಣ್ಣು ಪೂಜಾರಿ ಇದ್ದರು.