ಬಣಕಲ್‍: ಮೋಹನ್‍ಕುಮಾರ್ ಶೆಟ್ಟಿ ನೆನಪಿನಲ್ಲಿ ನುಡಿ ಗೀತ ನಮನ ಕಾರ್ಯಕ್ರಮ.

245

 ಬಣಕಲ್:ವಿವಿಧ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಮೋಹನ್‍ಕುಮಾರ್ ಎಸ್ ಶೆಟ್ಟಿ ಅವರ ಸಮಾಜಮುಖಿ ಕಾರ್ಯ ಸ್ಮರಣೀಯವಾದದ್ದು ಎಂದು ಮೂಡಿಗೆರೆ ತಾಲ್ಲೂಕು ಕಸಾಪ ಅಧ್ಯಕ್ಷ ಮಗ್ಗಲಮಕ್ಕಿ ಗಣೇಶ್ ಹೇಳಿದರು.
ಬಣಕಲ್‍ನಲ್ಲಿ ನಡೆದ ದಿ. ಮೋಹನ್‍ಕುಮಾರ್ ಶೆಟ್ಟಿ ನೆನಪಿನಲ್ಲಿ ನಡೆದ ನುಡಿ ಗೀತ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬಣಕಲ್ ಹೋಬಳಿ ಅಧ್ಯಕ್ಷರಾಗಿ ಮೋಹನ್ ಶೆಟ್ಟಿ ಅವರು ಹಲವಾರು ಉತ್ತಮ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಮನೆಯಂಗಳದಲ್ಲಿ ತಿಂಗಳ ಕಾರ್ಯಕ್ರಮ, ಕಥಾಕಮ್ಮಟ, ಸಾಹಿತ್ಯ ಅಕ್ಷತೆ ಕಾರ್ಯಕ್ರಮಗಳ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ. ಶೈಕ್ಷಣಿಕ ಮತ್ತು ದಾರ್ಮಿಕ ಕ್ಷೇತ್ರದಲ್ಲೂ ವಿಭಿನ್ನವಾದ ಪ್ರಯೋಗಗಳ ಮೂಲಕ ತಮ್ಮ ಛಾಪನ್ನು ಮೂಡಿಸಿದ್ದಾರೆ ಎಂದರು.
ಬಣಕಲ್ ಕಸಾಪದ ನಿಕಟಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ ಮಾತನಾಡಿ ಮೋಹನ್‍ಕುಮಾರ್ ಶೆಟ್ಟಿ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದವರು. ಬಣಕಲ್ ಸುಭಾಷನಗರದ ಆಟದ ಮೈದಾನವನ್ನು ಸಾರ್ವಜನಿಕ ಬಳಕೆಗೆ ನೀಡಬೇಕು ಎಂಬ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡುವ ಹೋರಾಟದಲ್ಲಿ ಗ್ರಾಮಸ್ಥರ ಮುಂದಾಳತ್ವ ವಹಿಸಿದ್ದರು ಎಂದರು.
ತಾಲ್ಲೂಕು ಕಸಾಪ ಸಾಂಸ್ಕøತಿಕ ರಾಯಬಾರಿ ದೀಪಕ್ ದೊಡ್ಡಯ್ಯ ಮಾತನಾಡಿ 23 ಗ್ರಾಮಗಳಲ್ಲಿ ಮನೆಯಂಗಳದಿ ತಿಂಗಳ ಸಾಹಿತ್ಯ ಕಾರ್ಯಕ್ರಮವನ್ನು ನಡೆಸಿ ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಪ್ರೋತ್ಸಾಹಿಸಿದವರು ಮೋಹನ್ ಕುಮಾರ್ ಶೆಟ್ಟಿ ಅವರು. ಅವರ ಅಗಲಿಕೆ ಸಾಹಿತ್ಯ, ಶೈಕ್ಷಣೀಕ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದರು.
ಈ ಸಂದರ್ಭದಲ್ಲಿ ಮೋಹನ್‍ಕುಮಾರ್ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. ಗಾಯಕರಾದ ಬಕ್ಕಿಮಂಜು, ಜಯಪಾಲ್ ಮತ್ತು ಶಾಂತಕುಮಾರ್ ಅವರು ಗೀತ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿದ್ಯಾಭಾರತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಶಿವರಾಮಶೆಟ್ಟಿ, ಗ್ರಾ.ಪಂ ಅಧ್ಯಕ್ಷ ಸುರೇಶ್, ಕೊಟ್ಟಿಗೆಹಾರ ವರ್ತಕರ ಸಂಘದ ಅಧ್ಯಕ್ಷ ಗಜೇಂದ್ರ, ಪುಷ್ಪಗಿರಿ ಸಾಂಸ್ಕøತಿಕ ಪ್ರತಿಷ್ಟಾನದ ಸಂಸ್ಥಾಪಕ ಡಾ.ಮೋಹನ್ ರಾಜಣ್ಣ, ಬಣಕಲ್ ಜೇಸಿಐ ಅಧ್ಯಕ್ಷ ದಿನೇಶ್, ಪೀಸ್ ಅಂಡ್ ಅರ್ವೇನೆಸ್ ಟ್ರಸ್ಟ್ ಅಧ್ಯಕ್ಷ ಅಲ್ತಾಪ್ ಬಿಳುಗುಳ, ತಾಲ್ಲೂಕು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಸುಬ್ರಮಣ್ಯ, ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ವಿದ್ಯಾಭಾರತಿ ಶಾಲೆ ಮುಖ್ಯ ಶಿಕ್ಷಕರಾದ ನಾಗರಾಜ್, ಮಾಲತಿ, ಹೋಬಳಿ ಕಸಾಪ ಕಾರ್ಯದರ್ಶಿ ವಸಂತ್ ಹಾರ್ಗೋಡು, ಗ್ರಾ.ಪಂ ಸದಸ್ಯರಾದ ದಿಲ್‍ದಾರ್ ಬೇಗಂ, ಮೇಘರಾಜ್, ಕಸಾಪ ಪಧಾಧಿಕಾರಿಗಳಾದ ಲಕ್ಷ್ಮಣಗೌಡ, ಎಂ.ಎಸ್ ಅಶೋಕ್, ಪ್ರಕಾಶ್, ಹಾಬಾ ನಾಗೇಶ್, ಎಂ.ಎಸ್ ನಾಗರಾಜ್, ಭಕ್ತೇಶ್, ಲಿಂಗರಾಜು ಮುಂತಾದವರು ಇದ್ದರು.