ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷರಾಗಿ ಎಚ್.ಕುಮಾರ್ ಆಯ್ಕೆ…

73
firstsuddi

ಚಿಕ್ಕಮಗಳೂರು: ಬಹುಜನ ಸಮಾಜ ಪಕ್ಷದ ತಾಲೂಕು ಅಧ್ಯಕ್ಷರಾಗಿ ಎಚ್.ಕುಮಾರ್, ಅಸೆಂಬ್ಲಿ ಸಂಯೋಜಕರಾಗಿ ಕೆ.ಎಸ್.ಮಂಜುಳಾ ಮತ್ತು ನವೀನ್ ಆಯ್ಕೆಯಾಗಿದ್ದಾರೆ.

ತಾಲೂಕು ಉಪಾಧ್ಯಕ್ಷರಾಗಿ ರೇಖಾ, ಹೊನ್ನಪ್ಪ, ಸಿದ್ದಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಆರ್.ವಸಂತ್, ಕಚೇರಿ ಕಾರ್ಯದರ್ಶಿಯಾಗಿ ಕಲಾವತಿ, ಖಜಾಂಚಿಯಾಗಿ ರತ್ನ, ಜಾಗರ ಹೋಬಳಿ ಅಧ್ಯಕ್ಷರಾಗಿ ಕಿಟ್ಟು, ಬಿ.ವಿ.ಎಫ್ ಸಂಯೋಜಕರಾಗಿ ಸಾಕಮ್ಮ ಆಯ್ಕೆಯಾಗಿದ್ದಾರೆ.
ನಗರ ಸಮಿತಿ ಅಧ್ಯಕ್ಷರಾಗಿ ವಿಜಯಕುಮಾರ್, ಉಪಾಧ್ಯಕ್ಷರಾಗಿ ನವೀನ ಕುಮಾರಿ ಆಯ್ಕೆಯಾಗಿದ್ದು, ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.

ಬಿಎಸ್‍ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಕೀರ್ ಹುಸೇನ್, ಕಾರ್ಯದರ್ಶಿ ಕೆ.ಬಿ.ಸುಧಾ, ಜಾಕೀರ್ ಆಲಿಖಾನ್, ಪಿ.ಪರಮೇಶ್ವರ್, ಜಿಲ್ಲಾ ಸಂಯೋಜಕ ಯು.ಬಿ.ಮಂಜಯ್ಯ, ಕೆ.ಆರ್.ಗಂಗಾಧರ್, ಬಿ.ಎಂ.ಶಂಕರ್, ಪಿ.ಕೆ.ಮಂಜುನಾಥ್, ಎಲ್.ಬಿ.ರಮೇಶ್ ಸಭೆಯಲ್ಲಿ ಪಾಲ್ಗೊಂಡಿದ್ದರು.