ಕಾಬೂಲ್ (ಅಫ್ಘಾನಿಸ್ತಾನ) : ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ತಖರ್ ಪ್ರಾಂತ್ಯದಲ್ಲಿ ತಂದೆ ತಾಲಿಬಾನ್ ವಿರೋಧಿ ಪಡೆಯಲ್ಲಿ ಸೇರ್ಪಡೆಯಾಗಿದ್ದಾನೆ ಎಂದು ಶಂಕಿಸಿ ಆತನ ಮಗನನ್ನು ಕೊಂದು ಕ್ರೂರತೆ ಮೆರೆದಿದ್ದಾರೆ.
ತಂದೆ ಅಫ್ಘಾನಿಸ್ತಾನದ ಪ್ರತಿರೋಧ ಪಡೆಗಳ ಭಾಗವಾಗಿರಬಹುದು ಎಂದು ಶಂಕಿಸಿ ಮಗುವನ್ನು ಕ್ರೂರವಾಗಿ ಕೊಲ್ಲಲಾಗಿದೆ ಎಂದು ಪಂಜ್ಶೀರ್ ಅಬ್ಸರ್ವರ್ ಟ್ವೀಟ್ ನಲ್ಲಿ ಹೇಳಿದೆ.
ನಾವು ಬದಲಾಗಿದ್ದೇವೆ ಎಂದು ತಾಲಿಬಾನ್ ನಾಯಕರು ಹೇಳುತ್ತಿದ್ದಾರೆ. ಆದರೆ ಅವರ ನಡವಳಿಕೆ ನೋಡಿದರೆ ತನ್ನ ಕ್ರೂರ ಮನಸ್ಥಿತಿಯಿಂದ ಇನ್ನೂ ಹೊರ ಬಂದಿಲ್ಲ ಎಂಬುದು ಸ್ಪಷ್ಟವಾಗಿದೆ.










