ಬಿಜೆಪಿ, ಜೆಡಿಎಸ್ ಹಾಗೂ ಅನರ್ಹ ಶಾಸಕರಿಗೆಲ್ಲಾ ನನ್ನ ಕಂಡರೆ ಭಯ-ಹೀಗಾಗಿ ಎಲ್ಲರೂ ನನ್ನನ್ನೇ ಟಾರ್ಗೆಟ್ ಮಾಡುತ್ತಾರೆ:ಸಿದ್ದರಾಮಯ್ಯ.

223
firstsuddi

ಮೈಸೂರು : ಬಿಜೆಪಿ, ಜೆಡಿಎಸ್ ಹಾಗೂ ಅನರ್ಹ ಶಾಸಕರಿಗೆಲ್ಲಾ ನನ್ನ ಕಂಡರೆ ಭಯ ಇರಬೇಕು. ಹೀಗಾಗಿ ಎಲ್ಲರೂ ನನ್ನನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ, ಜೆಡಿಎಸ್ ಹಾಗೂ ಅನರ್ಹ ಶಾಸಕರಿಗೆ ನಾನೇ ಟಾರ್ಗೆಟ್. ಇದನ್ನೆಲ್ಲಾ ಗಮನಿಸಿದರೆ ಅವರಿಗೆ ನನ್ನ ಕಂಡರೆ ಭಯ ಅನಿಸುತ್ತದೆ. ಹಾಗಾಗಿ ಎಲ್ಲರೂ ನನ್ನನ್ನೇ ಟಾರ್ಗೆಟ್ ಮಾಡುತ್ತಾರೆ. ನಾನು ಕಾಂಗ್ರೆಸ್ ಪಕ್ಷದಲ್ಲಿ ಏಕಾಂಗಿಯಲ್ಲ. ಕಾಂಗ್ರೆಸ್ ಯಾರನ್ನೂ ಏಕಾಂಗಿ ಮಾಡುವುದಿಲ್ಲ. ಯಡಿಯೂರಪ್ಪ ಅವರಿಗೆ ನಾನು ಏಕಾಂಗಿಯಾಗಿರಬೇಕು ಅನಿಸಿರಬಹುದು. ಆದರೆ ಅವರ ಆಸೆಗಳು ಯಾವುದು ಈಡೇರುವುದಿಲ್ಲ ಎಂದರು. ಇದೇ ವೇಳೆ ಶ್ರೀ ರಾಮುಲು ಅವರು ಸಿದ್ದರಾಮಯ್ಯ ಅವರಿಗೆ ನೀಡಿದ ಸವಾಲಿನ ಬಗ್ಗೆ ವ್ಯಂಗ್ಯ ಭರಿತವಾಗಿ ಪ್ರತಿಕ್ರಯಿಸಿದ ಅವರು, ಸಚಿವ ಶ್ರೀ ರಾಮುಲು ಅವರು ವೆರಿ ವೆರಿ ಪಾಪ್ಯುಲರ್ ಲೀಡರ್. ನಾನು ಅವರಷ್ಟು ಪಾಪ್ಯುಲರ್ ಅಲ್ಲ. ಅವರು ಯಾರ ವಿರುದ್ಧವಾದರೂ ತೊಡೆ ತಟ್ಟುತ್ತಾರೆ. ಆದರೆ ನಮಗೆ ಅವರ ಹಾಗೆ ತೊಡೆ ತಟ್ಟಲು ಬರುವುದಿಲ್ಲ ಎಂದು ಹೇಳಿದರು.