ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಿಯೋ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಬಿಜೆಪಿ ನಾಯಕರ ವಿರುದ್ಧ ಟ್ವಿಟರ್ ಮೂಲಕ ವಾಗ್ದಾಳಿ ನಡೆಸಿದ್ದು, “ಆಡಿಯೋ ಟೇಪ್ ಜೊತೆಗೆ ಬಿಜೆಪಿಯ ಸಂಚು ಬಹಿರಂಗವಾಗುತ್ತಿದ್ದಂತೆ ಕೂಗುಮಾರಿ ಬಿಜೆಪಿ ನಾಯಕರುಗಳು “ಸಂತೆಯಲ್ಲಿ ಬೆತ್ತಲಾದ ಕಳ್ಳನ” ರೀತಿ ಚಡಪಡಿಕೆಯ ಚೀರಾಟ ಮಾಡುತ್ತಿದ್ದಾರೆ. ನೀವೆಷ್ಟೇ ಸುಳ್ಳುಗಳು ಹೇಳಿದರೂ ಮಾನ ಮುಚ್ಚುವ ಬಟ್ಟೆಯಾಗಲಾರದು, ರಾಜ್ಯದ ಜನತೆ ಎದುರು ನಿಮ್ಮ ಅಧಿಕಾರ ಲಾಲಸೆ, ಕಪಟತನ, ಅನೈತಿಕ ರಾಜಕಾರಣ ಬಯಲಾಗಿದೆ. ಬಿಜೆಪಿ ಸರ್ಕಾರದ ದಿನಗಳು ನೂರು. ಶೂನ್ಯ ಸಾಧನೆಗೆ ಜಾಹೀರಾತು ನೂರಾರು. ಅತಿವೃಷ್ಟಿ ನಿರ್ವಹಣೆಯಲ್ಲಿ ವಿಫಲ, ಅನಾವೃಷ್ಟಿ ನಿರ್ವಹಣೆಯಲ್ಲಿ ವಿಫಲ ಕೇಂದ್ರದಿಂದ ಪರಿಹಾರ ತರುವಲ್ಲಿ ವಿಫಲ, ವಿಫಲತೆಯನ್ನು ಆಚರಿಸುತ್ತಿರುವ ಬಿಎಸ್‌ವೈ ನೇತೃತ್ವದ ಸರಕಾರವು ಪ್ರದರ್ಶಿಸುತ್ತಿದೆ ಲಜ್ಜೆಗೇಡಿತನ ಎಂದು ಟ್ವೀಟ್ ಮಾಡಿದೆ.










