ಬಿಜೆಪಿಯವರು ರಿವೇಂಜ್ ಪಾಲಿಟಿಕ್ಸ್ ಶುರುಮಾಡಿದ್ದಾರೆ : ದಿನೇಶ್ ಗುಂಡೂರಾವ್.

210
firstsuddi

ಬೆಂಗಳೂರು : ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ಅಹಂಕಾರದಲ್ಲಿ ಸರ್ಕಾರವನ್ನು ನಡೆಸುತ್ತಿದ್ದಾರೆ. ಅಧಿವೇಶನ ಕೇವಲ ಮೂರು ದಿನಕ್ಕೆ ಮಾತ್ರ ಐಕೆ ಕರೆದಿದ್ದು. ಪ್ರವಾಹ, ಬರದ ಜೊತೆಗೆ ಹಲವಾರು ಸಮಸ್ಯೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕಿದೆ. ಆದರೆ ಸರ್ಕಾರದ ನಡೆ ಬೇಸರ ತರಿಸುತ್ತಿದೆ ಎಂದರು. ಇದೇ ವೇಳೆ ಮಾಜಿ ಡಿಸಿಎಂ ಪರಮೇಶ್ವರ್ ನಿವಾಸದ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕನ್ನಡ ಅಧೀನದ ಏಜೆನ್ಸಿಯನ್ನು ಬಳಸಿಕೊಂಡು ದಾಳಿ ಮಾಡಿಸಿದೆ. ಪ್ರತಿಪಕ್ಷವನ್ನು ಮುಗಿಸಲು ಪ್ರಯತ್ನ ಮಾಡುತ್ತಿದೆ. ಜನರು ಇದನ್ನು ಎಂದಿಗೂ ಒಪ್ಪುವುದಿಲ್ಲ. ಬಿಜೆಪಿ ಪಕ್ಷದಲ್ಲಿ ಎಷ್ಟು ಭ್ರಷ್ಟರಿದ್ದಾರೆ. ಬಿಜೆಪಿ ಮಂತ್ರಿಗಳ ಮೇಲೂ ಸಾಕಷ್ಟು ಆರೋಪಗಳಿವೆ, ಆದರೂ ಬಿಜೆಪಿಯವರು ರಿವೇಂಜ್ ಪಾಲಿಟಿಕ್ಸ್ ಶುರುಮಾಡಿದ್ದಾರೆ. ಇನ್ನೂ ದೇಶದ ಅರ್ಥವ್ಯವಸ್ಥೆ 5.8 ಪ್ರತಿಶತಕ್ಕೆ ಕುಸಿದೆ. ಆದರೆ ಸುಳ್ಳು ವದಂತಿಯನ್ನು ಹಬ್ಬಿಸಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.