ಬಿಸಿಯೂಟ ನೌಕರರ ಗೌರವಧನ 1,000 ರೂ. ಹೆಚ್ಚಳ…

82
firstsuddi

ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಕೆಲಸ ಮಾಡುತ್ತಿರುವ ಮುಖ್ಯ ಅಡುಗೆಯವರು ಹಾಗೂ ಸಹಾಯಕ ಅಡುಗೆಯವರ ಗೌರವಧನವನ್ನು 100 ರೂ. ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಬಜೆಟ್ ಘೋಷಣೆಯಂತೆ 2022-23 ಸಾಲಿನ ಶೈಕ್ಷಣಿಕ ವರ್ಷದಿಂದ ಗೌರವ ಧನವನ್ನು 1,000 ರೂ.ಗೆ ಹೆಚ್ಚಿಸಲಾಗಿದೆ. ಸದ್ಯ ಅಡುಗೆ ತಯಾರಕರ ಗೌರವ ಧನ 2,700 ರೂ. ಗಳಿಂದ 3,700 ರೂ. ಆಗಲಿದೆ. ಸಹಾಯಕಿಯರ ಗೌರವ ಧನ 2,600 ರೂ.ಗಳಿಂದ 3,600 ರೂ.ಗೆ ಏರಿಕೆಯಾಗಲಿದೆ.