ಬೆಂಗಳೂರು: ಚಾಕುವಿನಿಂದ ಇರಿದು ಇಬ್ಬರ ಬರ್ಬರ ಹತ್ಯೆ…

48
firstsuddi

ಬೆಂಗಳೂರು: ನಗರದ ಕುಂಬಾರಪೇಟೆಯ ಹರಿ ಅಂಗಡಿ ಮಳಿಗೆಯಲ್ಲಿ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಇಬ್ಬರನ್ನು ಬರ್ಬರ ಹತ್ಯೆ ಮಾಡಿದ್ದಾರೆ.

ಮೃತರನ್ನು ಸುರೇಶ್, ಮಹೇಂದ್ರ ಎಂದು ಗುರುತಿಸಲಾಗಿದೆ. ಮೃತ ಸುರೇಶ್ ಮತ್ತು ಮಹೇಂದ್ರ ಇಬ್ಬರು ಅಡುಗೆ ಉಪಕರಣಗಳನ್ನು ಮಾರಾಟ ಮಾಡುತ್ತಿದ್ದರು. ಆಸ್ತಿ ವಿಚಾರಕ್ಕೆ ಸಂಬಂಧಿಕರೇ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿಗಳಿಗೆ ಟಾರ್ಗೆಟ್ ಇದ್ದಿದ್ದು ಮೃತ ಸುರೇಶ್ ಮಾತ್ರ. ಆದರೆ, ಸುರೇಶ್ ಮೇಲೆ ದಾಳಿ ನಡೆಸುತ್ತಿದ್ದಾಗ ಬಿಡಿಸಲು ಬಂದ ಮಹೇಂದ್ರ ಎಂಬುವರ ಮೇಲೂ ಕಿಡಿಗೇಡಿಗಳು ದಾಳಿ ಮಾಡಿ ಇಬ್ಬರನ್ನು ಹತ್ಯೆ ಮಾಡಿದ್ದಾರೆ.

ಇಬ್ಬರು ಕೊಲೆಯಾಗಿರುವ ಬಗ್ಗೆ ಮಾಹಿತಿ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.