ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನಗರದ ಜನತೆಯಲ್ಲಿ ಕ್ಷಮೆ ಕೋರಿದ್ದಾರೆ.
ನಗರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ನಡೆಯಲಿದ್ದು, ಇನ್ನು 3 ದಿನ ನಗರದಲ್ಲಿ ಟ್ರಾಫಿಕ್ ಜಾಮ್ ಆಗಬಹುದು. ಹೀಗಾಗಿ ಬೆಂಗಳೂರು ಜನತೆಯ ಕ್ಷಮೆಯಾಚಿಸುತ್ತೇನೆ. ಆದರೆ ಮೂರು ದಿನದ ಟ್ರಾಫಿಕ್ ಜಾಮ್ ಸಹಿಸಿಕೊಂಡರೆ ಮುಂದಿನ 30 ವರ್ಷ ಕುಡಿಯುವ ನೀರಿಗೆ ಅನುಕೂಲವಾಗಲಿದೆ. ಆದ್ದರಿಂದ ನಮಗೆ ಸಹಕಾರ ನೀಡಿ ಎಂದು ವಿಡಿಯೋ ಮೂಲಕ ಡಿ.ಕೆ.ಶಿವಕುಮಾರ್ ಅವರು ಮನವಿ ಮಾಡಿಕೊಂಡಿದ್ದಾರೆ.
ಇಂದು ಕೆಂಗೇರಿಯ ಪೂರ್ಣಿಮಾ ಸಮುದಾಯಭವನದಿಂದ ಬಿಟಿಎಂ ಲೇಔಟ್ ನ ಅದ್ವೈತ ಪೆಟ್ರೋಲ್ ಬಂಕ್ ವರೆಗೂ ಪಾದಯಾತ್ರೆ ನಡೆಯಲಿದ್ದು, ನಾಳೆ ಅದ್ವೈತ ಪೆಟ್ರೋಲ್ ಬಂಕ್ ನಿಂದ ಅರಮನೆ ಮೈದಾನದವರೆಗೆ ಪಾದಯಾತ್ರೆ ಸಾಗಲಿದೆ. ಮೂರನೇ ದಿನ ಅರಮನೆ ಮೈದಾನದಿಂದ ಬಸವನಗುಡಿ ನ್ಯಾಷನಲ್ ಕಾಲೇಜ್ ವರೆಗೂ ಪಾದ ಯಾತ್ರೆ ನಡೆಯಲಿದೆ.










