ಬೆತ್ತಲೆ ಫೋಟೋಶೂಟ್ ಪ್ರಕರಣ; ನಟ ರಣವೀರ್ ಸಿಂಗ್ ವಿರುದ್ಧ ದೂರು ದಾಖಲು…

73
firstsuddi

ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್ ಬೆತ್ತಲೆಯಾಗಿ ಫೋಟೋ ಶೂಟ್ ಮಾಡಿಸಿಕೊಂಡಿದ್ದರು. ಇದೀಗ ಅವರ ಮೇಲೆ ದೂರು ದಾಖಲಾಗಿದೆ.

ಮುಂಬೈನ ಶ್ಯಾಮ್ ಮಂಗರಮ್ ಫೌಂಡೇಶನ್ ಈ ಬಗ್ಗೆ ಮುಂಬೈನಲ್ಲಿ ದೂರು ದಾಖಲು ಮಾಡಿದೆ. ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಟರು ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುತ್ತಿದ್ದಾರೆ. ಇದನ್ನು ಖಂಡಿಸಬೇಕು. ಈ ರೀತಿಯ ಫೋಟೋಗಳಿಂದ ಸಮಾಜವೇ ತಲೆತಗ್ಗಿಸುವಂತಾಗಿದೆ. ಅವರ ವಿರುದ್ಧ ಕ್ರಮ ತಗೆದುಕೊಳ್ಳುವಂತೆ ಫೌಂಡೇಶನ್ ಆಗ್ರಹಿಸಿದೆ. ಅಲ್ಲದೇ, ರಣವೀರ್ ಅಭಿಮಾನಿಗಳಿಗೆ ಕ್ಷಮೆ ಕೇಳಬೇಕೆಂದು ಹೇಳಿದೆ.

ರಣವೀರ್ ಸಿಂಗ್ ಖಾಸಗಿ ಮ್ಯಾಗಜಿನ್ ವೊಂದಕ್ಕೆ ಬೆತ್ತಲೆ ಫೋಟೋಶೂಟ್ ನೀಡಿರುವುದಲ್ಲದೇ, ಸಂದರ್ಶನ ಕೂಡ ನೀಡಿದ್ದರು. ನಟಿಸುವಾಗ ನನಗೆ ಬೆತ್ತಲಾಗುವುದು ನನಗೆ ತುಂಬಾ ಸುಲಭ ಆದರೆ ನೋಡುಗರು ನನ್ನ ನೋಡಿ ಮುಜುಗರ ಪಡುತ್ತಾರೆ ಅಂತಾ ಹೇಳಿಕೆ ನೀಡಿದ್ದರು. ರಣವೀರ್ ಸಂಪೂರ್ಣ ಬೆತ್ತಲೆಯಾಗಿ ಕಾಣಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ರಣವೀರ್ ಸಿಂಗ್ ಈ ರೀತಿಯಲ್ಲಿ ಕಾಣಿಸಿಕೊಳ್ಳಬಾರದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.