ಬೆಳಗಾವಿ : ಆಟೋ ಚಾಲಕನ ಬರ್ಬರ ಹತ್ಯೆ…

103
firstsuddi

ಬೆಳಗಾವಿ : ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಆಟೋ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಹೊರವಲಯದ ನಿರ್ಜನ ಪ್ರದೇಶದಲ್ಲಿ ನಡೆದಿದೆ.

ಕೊಲೆಯಾದ ಆಟೋ ಚಾಲಕನನ್ನು ನೋಹಾನ್ ಧಾರವಾಡಕರ್(23) ಎಂದು ಗುರುತಿಸಲಾಗಿದೆ. ನೋಹಾನ್ 5 ದಿನಗಳ ಹಿಂದೆ ಆಟೋ ಸಮೇತ ಮನೆಯಿಂದ ಹೊರಗಡೆ ತೆರಳಿದ್ದ. ಆದರೆ ಆತ ಮನೆಗೆ ಮರಳಿರಲಿಲ್ಲ. ನಿನ್ನೆ ಗಾಂಧಿನಗರದ ರಾಷ್ಟ್ರೀಯ ಹೆದ್ದಾರಿ ಬಳಿ ನಿರ್ಜನ ಪ್ರದೇಶದಲ್ಲಿ ಆಟೋ ಪತ್ತೆಯಾಗಿದ್ದು, ಪಾಳು ಬಿದ್ದ ಮನೆಯೊಂದರ ಶೌಚಾಲಯದಲ್ಲಿ ನೋಹಾನ್ ಶವ ಪತ್ತೆಯಾಗಿದೆ.

ನೋಹಾನ್ ನನ್ನು ಆತನ ಸ್ನೇಹಿತರೇ ಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.