ಬೇಲೂರು : ಶಾಸಕರ ಎದುರೇ ಸೋದರ ಸಂಬಂಧಿಗಳ ನಡುವೆ ಮಾರಾಮಾರಿ..

238
firstsuddi

ಹಾಸನ : ದಾರಿ ಬಿಡುವ ವಿಚಾರಕ್ಕೆ ಶಾಸಕರ ಎದುರೇ ಸೋದರ ಸಂಬಂಧಿಗಳು ಜಗಳವಾಡಿರುವ ಘಟನೆ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ. ರಾಯಪುರ ಗ್ರಾಮದ ಬೇಲೂರು ಎಪಿಎಂಸಿ ಸದಸ್ಯ ನಾಗರಾಜ್ ಹಾಗೂ ವಸಂತ್ ಅವರ ನಡುವೆ ಜಮೀನಿಗೆ ದಾರಿ ಬಿಡುವ ವಿಚಾರಕ್ಕೆ ಹಲವು ದಿನಗಳಿಂದ ಮೂಡಿದ್ದ ಜಗಳ ಬಗೆಹರಿದಿರಲಿಲ್ಲ ಎಂದು ತಿಳಿದು ಬಂದಿದ್ದು, ಸಮಸ್ಯೆಯನ್ನು ಬಗೆಹರಿಸಲು ಸ್ಥಳೀಯ ಶಾಸಕ ಲಿಂಗೇಶ್ ಅವರು ಇಬ್ಬರನ್ನು ಕಚೇರಿಗೆ ಕರೆಸಿಕೊಂಡಿದ್ದರು ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಶಾಸಕರ ಎದುರಲ್ಲೇ ಇಬ್ಬರು ಜಗಳವಾಡಿದ್ದಾರೆ. ನೋಡುತ್ತಿದ್ದಂತೆಯೇ ಇಬ್ಬರು ಹೊಡೆದಾಡಿಕೊಂಡಿದ್ದು, ಓರ್ವನಿಗೆ ಗಂಭೀರ ಗಾಯವಾಗಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.